Sunday, August 14, 2022

Latest Posts

ತಾಲಿಬಾನಿಗಳ ವಿಜಯವನ್ನು ಸಂಭ್ರಮಿಸುತ್ತಿರುವ ಮುಸ್ಲಿಂ ಜನತೆ ವಿರುದ್ಧ ಆಕ್ರೋಶ ಹೊರಹಾಕಿದ ನಟ ನಾಸೀರುದ್ದೀನ್​ ಶಾ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………..

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ವಿಜಯವನ್ನು ಸಂಭ್ರಮಿಸುತ್ತಿರುವ ಕೆಲ ಭಾರತೀಯ ಮುಸ್ಲಿಂ ಜನತೆ ವಿರುದ್ಧ ಬಾಲಿವುಡ್​ ಹಿರಿಯ ನಟ ನಾಸೀರುದ್ದೀನ್​ ಶಾ ಆಕ್ರೋಶ ಹೊರಹಾಕಿದ್ದಾರೆ.
ಅವರು ತಾಲಿಬಾನಿಗಳ ವಿಜಯವನ್ನು ಸಂಭ್ರಮಿಸುತ್ತಿರುವ ಭಾರತೀಯ ಮುಸ್ಲಿಮರನ್ನು ತಮ್ಮ ಮಾತುಗಳ ಮೂಲಕ ಕಿವಿಹಿಂಡಿದ್ದಾರೆ.
ಉರ್ದುವಿನಲ್ಲಿ ಮಾತನಾಡಿರುವ ನಾಸಿರುದ್ದೀನ್​ ಶಾ, ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಆಡಳಿತವನ್ನು ಸ್ವಾಗತಿಸಿದವರನ್ನು ಕಟುವಾಗಿ ಟೀಕಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಆಡಳಿತ ಮರಳಿರುವುದು ಇಡೀ ವಿಶ್ವದ ಪಾಲಿಗೆ ಕಳವಳಕಾರಿ ವಿಚಾರವಾಗಿದ್ದರೂ ಸಹ ಕೆಲ ಭಾರತೀಯ ಮುಸ್ಲಿಮರು ಈ ಅನಾಗರಿಕತೆಯನ್ನೂ ಸಂಭ್ರಮಿಸುತ್ತಿರೋದು ನಿಜಕ್ಕೂ ಅಪಾಯಕಾರಿಯಾಗಿದೆ ಎಂದಿದ್ದಾರೆ.
ತಾಲಿಬಾನಿಗಳಿಗೆ ಬೆಂಬಲ ಸೂಚಿಸಿರುವ ಕೆಲ ಭಾರತೀಯ ಮುಸ್ಲಿಮರು ತಮಗೆ ಸುಧಾರಿತ ಇಸ್ಲಾಂ ಧರ್ಮ ಬೇಕೆ ಅಥವಾ ಅನಾಗರಿಕ ಮೌಲ್ಯಗಳು ಬೇಕೆ ಎಂದು ತಮ್ಮನ್ನ ತಾವು ಪ್ರಶ್ನಿಸಿಕೊಳ್ಳಬೇಕಿದೆ. ನಾನು ಒಬ್ಬ ಭಾರತೀಯ ಮುಸ್ಲಿಂ. ಅನೇಕ ವರ್ಷಗಳ ಹಿಂದೆ ಮಿರ್ಜಾ ಗಾಲಿಬ್​ರು ಹೇಳಿರುವಂತೆ ನನ್ನ ಹಾಗೂ ದೇವರ ನಡುವಿನ ಸಂಬಂಧ ಅವಿನಾಭಾವವಾಗಿದೆ. ಇದಕ್ಕಾಗಿ ನನಗೆ ರಾಜಕೀಯ ಧರ್ಮದ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss