CINE | ʼನಟ ರಣ್‌ಬೀರ್‌ನ್ನು ರಾಮನ ಪಾತ್ರದಲ್ಲಿ ನೋಡೋದಕ್ಕೆ ಆಗೋದಿಲ್ಲʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾ ಶೂಟಿಂಗ್‌ ನಡೆಯುತ್ತಿದೆ. ನಟ ರಣ್‌ಬೀರ್‌ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್‌ ರಾವಣನಾಗಿ ಆಕ್ಟಿಂಗ್‌ ಮಾಡ್ತಿದ್ದಾರೆ.

ರಣ್​ಬೀರ್ ಕಪೂರ್ ನಟನೆಯ ರಾಮಾಯಣ ಕತೆ ಆಧರಿಸಿದ ಸಿನಿಮಾದ ಶೂಟಿಂಗ್ ಚಾಲ್ತಿಯಲ್ಲಿದೆ. ಹಿರಿಯ ನಿರ್ದೇಶಕ ನಿತೀಶ್ ತಿವಾರಿ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಸಿನಿಮಾದ ಕೆಲವು ಫೋಟೊಗಳಷ್ಟೆ ಇದೀಗ ಹೊರಗೆ ಬಂದಿವೆ. ಸಿನಿಮಾದ ಬಿಡುಗಡೆಗೆ ಕನಿಷ್ಟ ಒಂದು ವರ್ಷವಾದರೂ ಇದೆ. ಆಗಲೇ ಸಿನಿಮಾದ ಬಗ್ಗೆ ಋಣಾತ್ಮಕ ಮಾತುಗಳು ಆರಂಭವಾಗಿವೆ. ಇದೀಗ ಹಿರಿಯ ನಟರೊಬ್ಬರು ‘ರಣ್​ಬೀರ್ ಕಪೂರ್ ಅನ್ನು ರಾಮನಾಗಿ ಜನ ಒಪ್ಪಲ್ಲ’ ಎಂದಿದ್ದಾರೆ.

ಇಡೀ ದೇಶದ ಮೆಚ್ಚುಗೆ ಗಳಿಸಿದ್ದ ರಾಮಾನಂದ ಸಾಗರ್ ಅವರ ‘ರಾಮಾಯಣ’ ಧಾರಾವಾಹಿಯಲ್ಲಿ ಲಕ್ಷ್ಮಣನ ಪಾತ್ರದಲ್ಲಿ ನಟಿಸಿದ್ದ ಸುನಿಲ್ ಲಹರಿ ಇದೀಗ ರಣ್​ಬೀರ್ ಕಪೂರ್ ಅವರ ರಾಮಾಯಣದ ಬಗ್ಗೆ ಹೇಳಿಕೆ ನೀಡಿದ್ದು, ‘ಅನಿಮಲ್’ ಸಿನಿಮಾದ ನಂತರ ರಣ್​ಬೀರ್ ಕಪೂರ್ ಅನ್ನು ರಾಮನ ಪಾತ್ರದಲ್ಲಿ ಜನ ಒಪ್ಪುವುದಿಲ್ಲ ಎಂದಿದ್ದಾರೆ. ‘ರಣ್​ಬೀರ್ ಕಪೂರ್ ಸ್ಮಾರ್ಟ್ ಆಗಿದ್ದಾರೆ, ಬಹಳ ಒಳ್ಳೆಯ ನಟ ಆದರೂ ಸಹ ಅವರ ವ್ಯಕ್ತಿತ್ವ ರಾಮನ ಪಾತ್ರಕ್ಕೂ ಹೊಂದುವುದಿಲ್ಲ. ‘ಅನಿಮಲ್’ ಅಂಥಹಾ ಸಿನಿಮಾದಲ್ಲಿ ನಟಿಸಿದ ಬಳಿಕ ರಣ್​ಬೀರ್ ಅನ್ನು ರಾಮನ ಪಾತ್ರದಲ್ಲಿ ಜನ ಒಪ್ಪುವುದಿಲ್ಲ’ ಎಂದಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!