Monday, August 15, 2022

Latest Posts

ನಟ ಸಾಯಿ ಧರಮ್ ತೇಜ್ ಆಕ್ಸಿಡೆಂಟ್ ವಿಡಿಯೋ ವೈರಲ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ತೆಲುಗು ಖ್ಯಾತ ನಟ ಸಾಯಿ ಧರಮ್ ತೇಜ್ ಅವರ ಬೈಕ್ ಅಪಘಾತಕ್ಕೀಡಾಗಿದ್ದು, ಬೈಕ್ ಸ್ಕಿಡ್ ಆದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ವಿಡಿಯೋ ನೋಡಿದ ಎಲ್ಲರೂ ತೇಜ್ ಬದುಕುಳಿದಿರುವುದೇ ಹೆಚ್ಚು ಎಂದು ಕಮೆಂಟ್ ಮಾಡಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ತೇಜ್ ಹೆಲ್ಮೆಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಡಿಯೋದಲ್ಲೇನಿದೆ?

ಸಾಯಿ ಧರಮ್ ತೇಜ್ ಬೈಕ್‌ನಲ್ಲಿ ವೇಗವಾಗಿಯೇ ಬರುತ್ತಿದ್ದು, ಇದ್ದಕ್ಕಿದ್ದಂತೆ ಬೈಕ್ ಸ್ಕಿಡ್ ಆಗಿದೆ. ಪಕ್ಕದಲ್ಲೇ ಆಟೋ ಒಂದು ಹೋಗುತ್ತಿದ್ದು, ಸ್ವಲ್ಪ ಸಮಸ್ಯೆಯಾಗಿದ್ದರೂ ಬೈಕ್ ಆಟೋಗೆ ಡಿಕ್ಕಿಯಾಗುತ್ತಿತ್ತು. ನಿನ್ನೆ ಹಬ್ಬದ ಕಾರಣ ಹೆಚ್ಚು ಟ್ರಾಫಿಕ್ ಇರಲಿಲ್ಲ. ಖಾಲಿ ರಸ್ತೆಯಾದ ಕಾರಣ ತೇಜ್ ಸ್ಪೀಡ್‌ನಲ್ಲಿದ್ದರು ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss