ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ನಾಳೆ ಪಾದಯಾತ್ರೆ ಆರಂಭಿಸಲಿದ್ದು, ಈ ಪಾದಯಾತ್ರೆಗೆ ನಟ ಶಿವರಾಜ್ ಕುಮಾರ್ ಚಾಲನೆ ನೀಡಲಿದ್ದಾರೆ.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮೇಕೆದಾಟು ಸಂಗಮದಿಂದ ಈ ಪಾದಯಾತ್ರೆ ಬೆಳಿಗ್ಗೆ ಆರಂಭವಾಗಲಿದ್ದು, ನಟ ಶಿವರಾಜ್ ಕುಮಾರ್ ಚಾಲನೆ ನೀಡಲಿದ್ದು, ಈ ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ ತಿಳಿದುಬಂದಿದೆ.
ಸ್ವತಃ ಡಿ.ಕೆ ಶಿವಕುಮಾರ್ ಶಿವರಾಜ್ ಕುಮಾರ್ ಅವರಿಗೆ ಅಧಿಕೃತ ಆಹ್ವಾನ ನೀಡಿದ್ದು, ನಾಳೆ ಕನಕಪುರಕ್ಕೆ ಭೇಟಿ ನೀಡಲಿದ್ದಾರೆ.
ಕೇವಲ ಶಿವರಾಜ್ ಕುಮಾರ್ ಮಾತ್ರವಲ್ಲದೆ ನಟರಾದ ಸಾಧುಕೋಕಿಲ, ನಟಿಯರಾದ ಜಯಮಾಲಾ, ಉಮಾಶ್ರೀ, ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಮತ್ತಿತರರು ಪಾದಯಾತ್ರೆ ಸಂದರ್ಭ ಆಗಮಿಸಲಿದ್ದಾರೆ.