spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

20 ಕೋಟಿ ರೂ. ತೆರಿಗೆ ವಂಚನೆ ಆರೋಪದಲ್ಲಿ ನಟ ಸೋನು ಸೂದ್!

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬಾಲಿವುಡ್ ನಟ ಸೋನು ಸೂದ್ ಐಟಿ ಅಧಿಕಾರಿಗಳ ಬಲೆಗೆ ಬಿದ್ದಿದ್ದು, 20 ಕೊಟಿ ರೂ. ತೆರಿಗೆ ವಂಚನೆ ಆರೋಪ ಹೊತ್ತಿದ್ದಾರೆ.
ಕಳೆದ ಮೂರು ದಿನಗಳ ಕಾಲ ಸೋನು ಸೂದ್ ರ ಮುಂಬೈ, ಲಖನೌ, ಕಾನ್ಪುರ, ಜೈಪುರ, ದೆಹಲಿ, ಗುರುಗ್ರಾಮ ಮನೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈ ಹೇಳಿಕೆ ನೀಡಿದ್ದಾರೆ.
ಸೋನು ಸೂದ್ ಚ್ಯಾರಿಟಿ ಫೌಂಡೇಶನ್​​ ವಿದೇಶಿ ಕೊಡುಗೆ ಕಾಯ್ದೆಯ ಉಲ್ಲಂಘನೆ ಮಾಡಿ, ಕ್ರೌಡ್‌ಫಂಡಿಂಗ್ ಮೂಲಕ ವಿದೇಶಿದಿಂದ 2.1 ಕೋಟಿ ರೂ. ಹಣ ಸಂಗ್ರಹಿಸಿದೆ ಎಂದು ಐಟಿ ಇಲಾಖೆ ಆರೋಪಿಸಿದೆ.
ಪರಿಶೀಲನೆ ವೇಳೆ ಐಟಿ ಅಧಿಕಾರಿಗಳು ಸೋನು ಸೂದ್ ಅವರ ಸಹಚರರ ಮನೆಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದು, ಅಲ್ಲಿ ಯಾವುದೇ ಆಧಾರವಿಲ್ಲದ ಸುಮಾರು 20 ದಾಖಲೆಗಳನ್ನು ಪತ್ತೆ ಮಾಡಿದ್ದಾರೆ. ಇದರೊಂದಿಗೆ ಸೋನು ಸೂದ್ 20 ಕೋಟಿ ರೂ. ತೆರಿಗೆ ವಂಚನೆ ಮಾಡಿರುವುದಾಗಿ ಅಧಿಕಾರಿಗಳು ಆರೋಪಿಸಿದ್ದಾರೆ.
ಕೋವಿಡ್​ ಸಂಕಷ್ಟದಲ್ಲಿ ಜನರಿಗೆ ಸಹಾಯ ಮಾಡುವ ಮೂಲಕ ಖ್ಯಾತಿ ಹೊಂದಿದ್ದ ಸೋನು ಸೂದ್​​​ ಚಾರಿಟಿ ಫೌಂಡೇಶನ್​ ಮೇಲೆಯೂ ಐಟಿ ಇಲಾಖೆ ಆರೋಪ ಮಾಡಿದೆ. 2021 ರ ಏಪ್ರಿಲ್ ​ನವರೆಗೆ 18 ಕೋಟಿ ರೂ.ಗಳಿಗೂ ಹೆಚ್ಚು ದೇಣಿಗೆ ಮೊತ್ತ ಸಂಗ್ರಹಿಸಿದ್ದ ಸೂದ್ ಚಾರಿಟಿ ಫೌಂಡೇಶನ್, ದೇಣಿಗೆ ಮೊತ್ತದಲ್ಲಿ ಕೇವಲ 1.9 ಕೋಟಿ ರೂ. ಗಳನ್ನು ಜನರಿಗಾಗಿ ಬಳಸಿದ್ದು, ಉಳಿದ 17 ಕೋಟಿ ರೂ. ಹಣ ಸಂಸ್ಥೆಯ ಖಾತೆಯಲ್ಲಿಯೇ ಉಳಿದಿದೆ ಎಂದು ಐಟಿ ಇಲಾಖೆ ಆರೋಪಿಸಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss