ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಲಾಕ್ ಡೌನ್ ಹಿನ್ನೆಲೆ ಧಾರವಾಹಿಗಳ ಶೂಟಿಂಗ್ ಸ್ಥಗಿತಗೊಂಡಿದೆ. ಬೇರೆ ಉದ್ಯೋಗವೂ ಸಿಗುತ್ತಿಲ್ಲವೆಂದು ಮನನೊಂದ ಧಾರವಾಹಿ ನಟ ನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ.
31 ವರ್ಷದ ಬೆಂಗಾಲಿ ಧಾರಾವಾಹಿಯ ಪ್ರಸಿದ್ಧ ನಟ ಸುವೋ ಚಕ್ರವರ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೆಲಸ ಸಿಕ್ಕಿಲ್ಲ ಎಂಬ ಕಾರಣಕ್ಕೆ ನಿದ್ದೆ ಮಾತ್ರೆ ನುಂಗಿ ಫೇಸ್ ಬುಕ್ ಲೈವ್ನಲ್ಲಿ ಆತ್ಮಹತ್ಯೆಗೆ ಮುಂದಾಗಿದ್ದಾರೆ.
“ತಂದೆಯನ್ನು ಕಳೆದುಕೊಂಡಿರುವ ನಾವು ಅವರ ಪಿಂಚಣಿ ದುಡ್ಡಿನಲ್ಲಿ ಬದುಕುತ್ತಿದ್ದೇವೆ. ಅಮ್ಮನಿಗೆ ನಾನು ಹೊರೆಯಾಗುವುದು ಇಷ್ಟವಿಲ್ಲ. ಅದಕ್ಕಾಗಿ ಸಾಯಲು ಬಯಸಿದ್ದೇನೆ” ಎಂದು ಹೇಳಿದ್ದಾರೆ
ಸುವೋ ಸ್ನೇಹಿತನೊಬ್ಬ ಫೇಸ್ ಬುಕ್ ನಲ್ಲಿ ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಫೇಸ್ ಬುಕ್ ಲೈವ್ ಅನ್ನು ಟ್ರ್ಯಾಕ್ ಮಾಡಿ ಪೊಲೀಸರು ನಟನ ಜೀವ ಉಳಿಸಿದ್ದಾರೆ.