ಹೊಸದಿಗಂತ ಡಿಜಿಟಲ್ ಡೆಸ್ಕ್ :
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕನ್ನಡ ಚಿತ್ರರಂಗದ ಹರಿಪ್ರಿಯ ದಂಪತಿಗಳು ಭಾನುವಾರ ಭೇಟಿ ನೀಡಿದರು.
ಕನ್ನಡ ಚಿತ್ರರಂಗದ ನಟ ವಸಿಷ್ಠ ಸಿಂಹ ಹಾಗೂ ಅವರ ಪತ್ನಿ ನಟಿ ಹರಿಪ್ರಿಯ ಅವರು ಕ್ಷೇತ್ರಕ್ಕೆ ಭೇಟಿ ನೀಡಿದರು. ಕ್ಷೇತ್ರಕ್ಕೆ ಭೇಟಿ ನೀಡಿದ ಅವರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದರುಶನ ಪಡೆದು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಶ್ರೀ ಹೊಸಳಿಗಮ್ಮನ ದರುಶನ ಪಡೆದರು.
ವಸಿಷ್ಠ ಸಿಂಹ ಅವರು ಅವರ ಅಕ್ಕನ ಹರಕೆಯಂತೆ ತುಲಾಭಾರ ಸೇವೆ ಸಲ್ಲಿಸಿದರು. ಕ್ಷೇತ್ರದ ವತಿಯಿಂದ ವಸಿಷ್ಠ ಸಿಂಹ ದಂಪತಿ ಗಳನ್ನು ಗೌರವಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಸದಸ್ಯರಾದ ಶೋಭಾ ಗಿರುಧರ್, ವನಜಾ ಭಟ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.