ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೊರೋನಾ ಸುಳಿಯಲ್ಲಿ ಸಿಲುಕಿದ ಬಾಲಿವುಡ್: ನಟ ವಿಕ್ಕಿ ಕೌಶಲ್, ನಟಿ ಭೂಮಿ ಪೆಡ್ನೇಕರ್​ಗೆ ಪಾಸಿಟಿವ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ಮಹಾರಾಷ್ಟ್ರದಲ್ಲಿ ದಿನೇ ದಿನೇ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು,ಬಾಲಿವುಡ್​ ಸೆಲೆಬ್ರಿಟಿಗಳು ಕೂಡ ಕೋವಿಡ್​ ಸುಳಿಯಲ್ಲಿ ಸಿಲುಕುತ್ತಿದ್ದು, ಇದೀಗ ನಟ ವಿಕ್ಕಿ ಕೌಶಲ್ ಹಾಗೂ ನಟಿ ಭೂಮಿ ಪೆಡ್ನೇಕರ್​ಗೆ ಸೋಂಕು ತಗುಲಿರುವುದು ದೃಢವಾಗಿದೆ.
ಇಬ್ಬರೂ ತಮ್ಮ ಇನ್‌ಸ್ಟಾಗ್ರಾಮ್ ಪೇಜ್​ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

“ಎಲ್ಲಾ ಕಾಳಜಿ ಮತ್ತು ಮುನ್ನೆಚ್ಚರಿಕೆಗಳ ಹೊರತಾಗಿಯೂ, ದುರದೃಷ್ಟವಶಾತ್ ನನಗೆ ಕೋವಿಡ್​ ತಗುಲಿದೆ. ಅಗತ್ಯ ಕ್ರಮಗಳನ್ನು ಅನುಸರಿಸಿ ಮನೆಯಲ್ಲಿಯೇ ಕ್ವಾರಂಟೈನ್​ ಆಗಿದ್ದೇನೆ. ವೈದ್ಯರು ಸೂಚಿಸಿದ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರೂ ತಕ್ಷಣವೇ ಕೊರೋನಾ ಪರೀಕ್ಷೆಗೆ ಒಳಗಾಗುವಂತೆ ವಿನಂತಿಸುತ್ತೇನೆ. ಎಲ್ಲರೂ ಕಾಳಜಿ ವಹಿಸಿ ಮತ್ತು ಸುರಕ್ಷಿತವಾಗಿರಿ” ಎಂದು ವಿಕ್ಕಿ ಕೌಶಲ್ ಬರೆದುಕೊಂಡಿದ್ದಾರೆ.

‘ನನ್ನ ಕೊರೋನಾ ವರದಿ ಪಾಸಿಟಿವ್​ ಬಂದಿದ್ದು, ಸೌಮ್ಯ ಲಕ್ಷಣಗಳಿವೆ. ಆದರೆ ನಾನು ಆರೋಗ್ಯವಾಗಿದ್ದು, ಐಸೋಲೇಷನ್​ಗೆ ಒಳಪಟ್ಟಿರುವೆ. ವೈದ್ಯರ ಸಲಹೆಯನ್ನು ಪಾಲಿಸುತ್ತಿರುವೆ. ನನ್ನ ಸಂಪರ್ಕಕ್ಕೆ ಬಂದವರು ಟೆಸ್ಟ್​ ಮಾಡಿಸಿಕೊಳ್ಳಿ’ ಎಂದು ಭೂಮಿ ತಮ್ಮ ಇನ್‌ಸ್ಟಾಗ್ರಾಮ್ ಪೇಜ್​ನಲ್ಲಿ ಬರೆದಿದ್ದಾರೆ.

ಕಳೆದ ಕೆಲವು ವಾರಗಳಲ್ಲಿ ಬಾಲಿವುಡ್​ ಸೆಲೆಬ್ರಿಟಿಗಳಾದ ಅಮೀರ್ ಖಾನ್, ಅಕ್ಷಯ್ ಕುಮಾರ್, ಗೋವಿಂದ, ಆಲಿಯಾ ಭಟ್, ರಣಬೀರ್ ಕಪೂರ್, ಕಾರ್ತಿಕ್ ಆರ್ಯನ್, ಸಂಜಯ್ ಲೀಲಾ ಭನ್ಸಾಲಿ ಸೇರಿದಂತೆ ಹಲವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss