Wednesday, August 17, 2022

Latest Posts

ನಟ ಸಂಚಾರಿ ವಿಜಯ್ ಹುಟ್ಟು ಹಬ್ಬಕ್ಕೆ ವಿಶೇಷ ಗಿಫ್ಟ್​ ನೀಡಿದ ಚಿತ್ರತಂಡ: ‘ಮೇಲೊಬ್ಬ ಮಾಯಾವಿಯ ಪೋಸ್ಟರ್​ ಬಿಡುಗಡೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಹುಟ್ಟು ಹಬ್ಬದ ಹಿನ್ನೆಲೆ ‘ಮೇಲೊಬ್ಬ ಮಾಯಾವಿ’ ಚಿತ್ರ ತಂಡ ವಿಶೇಷ ಗಿಫ್ಟ್ ನೀಡಿದ್ದು, ಕಲಾವಿದನ ಸವಿ ನೆನಪಿಗಾಗಿ ಕಂಟೆಂಟ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದೆ.
ಬಿ.ನವೀನ್ ಕೃಷ್ಣ ನಿರ್ದೇಶನ ‘ಮೇಲೊಬ್ಬ ಮಾಯಾವಿ’ ಚಿತ್ರದಲ್ಲಿ ವಿಜಯ್​​ ಇರುವೆ ಎಂಬ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.
ಕಂಟೆಂಟ್ ಮೋಷನ್ ಪೋಸ್ಟರ್​ನಲ್ಲಿ ಹರಳು ಮಾಫಿಯಾದ ಹಿಂದಿನ ಕಟು ಸತ್ಯಗಳನ್ನು ತೆರೆಯ ಮೇಲೆ ತರಲಿದೆ ಎಂಬ ಹಿಂಟ್ ಅನ್ನು ಚಿತ್ರತಂಡ ನೀಡಿದೆ. ”ಯಾವತ್ತೂ ಹುಟ್ಟಿಲ್ಲ, ಯಾವತ್ತೂ ಸತ್ತಿಲ್ಲ.. ಜಗಕೇ ಭೇಟಿ ಕೊಟ್ಟೆ ನೀ ಅಷ್ಟೆ..” ಅನ್ನುವ ಸಾಲುಗಳು ಸಂಚಾರಿ ವಿಜಯ್ ಅವರ ಧ್ವನಿಯಲ್ಲಿಯೇ ಇದ್ದು ವಾಸ್ತವಕ್ಕೆ ಹಿಡಿದ ಕನ್ನಡಿಯಂತಿದೆ.
ಸತ್ಯ ಕಥೆ ಆಧಾರಿತ ಈ ಚಿತ್ರವನ್ನು ಬಿ.ನವೀನ್ ಕೃಷ್ಣ ಕಥೆ ಬರೆದು ನಿರ್ದೇಶಿಸಿದ್ದಾರೆ. ಶ್ರೀ ಕಟೀಲ್ ಸಿನಿಮಾಸ್ ಲಾಂಛನದಲ್ಲಿ ಭರತ್ ಹಾಗೂ ತನ್ವಿ ಅಮಿನ್ ಕೊಲ್ಯ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.
ಚಿತ್ರಕ್ಕೆ ಎಲ್‌. ಎನ್. ಶಾಸ್ತ್ರಿ ಸಂಗೀತ ನೀಡಿದ್ದು, ಚಕ್ರವರ್ತಿ ಚಂದ್ರಚೂಡ್ ಸಾಹಿತ್ಯ, ಕೆ.ಗಿರೀಶ್‌ ಕುಮಾರ್‌ ಸಂಕಲನ, ದೀಪಿತ್‌ ಬಿಜೈ ರತ್ನಾಕರ್‌ ಛಾಯಾಗ್ರಹಣ ಇದೆ.ಮಣಿಕಾಂತ್‌ ಕದ್ರಿ ಹಿನ್ನೆಲೆ ಸಂಗೀತ ನೀಡಿರುವ ಈ ಚಿತ್ರದಲ್ಲಿ ಸಂಚಾರಿ ವಿಜಯ್‌, ಅನನ್ಯ ಶೆಟ್ಟಿ, ಚಕ್ರವರ್ತಿ ಚಂದ್ರಚೂಡ್‌, ಕೃಷ್ಣಮೂರ್ತಿ ಕವತ್ತಾರ್‌, ಎಂ ಕೆ ಮಠ, ಬೆನಕ ನಂಜಪ್ಪ, ಮಾಸ್ಟರ್‌ ಲಕ್ಷ್ಮಿ ಅರ್ಪಣ್‌, ನವೀನ್‌ಕುಮಾರ್‌, ಪವಿತ್ರಾ ಜಯರಾಮ್‌, ಮುಖೇಶ್‌, ಡಾ. ಮನೋನ್ಮಣಿ ಸೇರಿದಂತೆ ಸಾಕಷ್ಟು ರಂಗಭೂಮಿ ನಟರು ಚಿತ್ರದಲ್ಲಿ ನಟಿಸಿದ್ದಾರೆ.
ಸದ್ಯ ಸರ್ಕಾರ ಚಿತ್ರಮಂದಿರಗಳ ಆರಂಭಕ್ಕೆ ಅನುಮತಿ ನೀಡಿದರೆ, ಶೀಘ್ರದಲ್ಲೇ ‘ಮೇಲೊಬ್ಬ ಮಾಯಾವಿ’ ಚಿತ್ರ ತೆರೆಗೆ ಬರಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!