Sunday, April 18, 2021

Latest Posts

ಮತದಾನ ಮಾಡಲು ಸೈಕಲ್​​ನಲ್ಲಿ ಬಂದ ನಟ ವಿಜಯ್: ಯಾಕೆ ಗೊತ್ತಾ?

ಹೊಸದಿಗಂತ ಆನ್ ಲೈನ್ ಡೆಸ್ಕ್:

ತಮಿಳುನಾಡು ವಿಧಾನಸಭೆಗೆ ಚುನಾವಣೆ ವೇಳೆ ಮತದಾನ ಮಾಡಲು ನಟ ವಿಜಯ್ ಅವರು ಸೈಕಲ್​​ನಲ್ಲಿ ಬಂದಿದ್ದು, ಸಾಕಷ್ಟು ಸುದ್ದಿಯಾಗಿತ್ತು. ಪೆಟ್ರೋಲ್​ ರೇಟ್​ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಸಂದೇಶ ಸಾರಲು ಸೈಕಲ್​ ಮೇಲೆ ಬಂದಿದ್ದರು ಅನ್ನೋ ಮಾತುಗಳು ಕೇಳಿ ಬಂದಿದ್ದವು. ಆದರೆ ಇದೀಗ ನಟ ವಿಜಯ್​ ಅವರು, ಯಾಕೆ ಸೈಕಲ್​ ಮೇಲೆ ಬಂದರು ಅಂತಾ ಸ್ಪಷ್ಟನೆ ನೀಡಿದ್ದಾರೆ.
ವಿಜಯ್ ಅವರ ವಕ್ತಾರರು ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿದ್ದು, ವಿಜಯ್ ಅವರು ಸೈಕಲ್​ ಮೇಲೆ ಬಂದಿರುವ ಹಿಂದೆ ಯಾವುದೇ ಉದ್ದೇಶ ಇರಲಿಲ್ಲ. ಅವರ ಮನೆಯ ಪಕ್ಕದಲ್ಲೇ ಮತಗಟ್ಟೆ ಇದ್ದರಿಂದ ಸೈಕಲ್​ ಮೂಲಕ ತೆರಳಲು ನಿರ್ಧರಿಸಿದ್ದರು. ಇದರಿಂದ ಯಾವುದೇ ಟ್ರಾಫಿಕ್​ ಜಾಮ್ ಆಗಲ್ಲ ಅನ್ನೋದು ಅವರ ನಿರ್ಧಾರವಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss