Tuesday, June 28, 2022

Latest Posts

ಕೋಟಿಗೊಬ್ಬ-3 ಮೂಲಕ ಸ್ಯಾಂಡಲ್ ವುಡ್ ಗೆ ನಟಿ ಅಭಿರಾಮಿ ರೀ ಎಂಟ್ರಿ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ದಕ್ಷಿಣ ಭಾರತ ಸ್ಟಾರ್ ನಟಿ ಅಭಿರಾಮಿ ಮತ್ತೆ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದು, ಅದರಲ್ಲೂ ಕಿಚ್ಚ ಸುದೀಪ ನಟಿಸುತ್ತಿರುವ ಕೋಟಿಗೊಬ್ಬ-3 ಚಿತ್ರದ ಮೂಲಕ ಮತ್ತೆ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನೇನು ಕೆಲವು ದಿನಗಳಲ್ಲಿ ಬಿಡುಗಡೆಯಾಗಲು ಸಿದ್ದವಾಗಿರುವ ಕೋಟಿಗೊಬ್ಬ-3 ಸಿನಿಮಾದಲ್ಲಿ ನಟಿ ಅಭಿರಾಮಿ ನಟಿಸುತ್ತಿರುವುದು ಸಿನಿ ಅಭಿಮಾನಿಗಳಿಗೆ ಸಂತಸ ತಂದಿದೆ.
ಕೋಟಿಗೊಬ್ಬ ಸಿನಿಮಾದ ಫ್ಲಾಶ್ ಬ್ಯಾಕ್ ಸ್ಟೋರಿಯಲ್ಲಿ ಅಮ್ಮನ ಪಾತ್ರ ಮಾಡಿದ್ದ ಅಭಿರಾಮಿ, ಈಗ ಹೆಲ್ತ್ ಕಲೆಕ್ಟರ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಶಿವಕಾರ್ತಿಕ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ಇದರಲ್ಲಿ ಮಹಿಳೆಗೆ ಪ್ರಮುಖ ಪಾತ್ರ ನೀಡಲಾಗಿದೆ.
ಕಳೆದ ಹಲವಾರು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿರುವ ಅಭಿರಾಮಿ ತಮ್ಮ ತೆಲುಗು, ತಮಿಳು ಸಿನಮಾಗಳ ಚಿತ್ರೀಕರಣಕ್ಕಾಗಿ ಭಾರತಕ್ಕೆ ಬಂದು ಹೋಗುತ್ತಿದ್ದರು. ಇದೀಗ ಕೆಲ ತಿಂಗಳ ಹಿಂದೆಯಷ್ಟೆ ಬೆಂಗಳೂರಿಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss