ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಹ್ಲಿಗೆ ಗೊತ್ತಿಲ್ಲದೆ ನಟಿ ಅನವೀತ್ ಕೌರ್ ಫೋಟೋ ಒಂದಕ್ಕೆ ಲೈಕ್ ಕೊಟ್ಟಿದ್ದರು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಸ್ವತಃ ವಿರಾಟ್ ಕೊಹ್ಲಿ ಸ್ಪಷ್ಟನೆ ನೀಡಿದ್ದರು. ಆದರೂ ಟ್ರೋಲ್ ಕಡಿಮೆಯಾಗಿರಲಿಲ್ಲ. ಈ ಘಟನೆ ನಟಿ ಅವನೀತ್ ಕೌರ್‌ಗೆ ಒಂದು ವರದಾನವೇ ಆಗಿದೆ.
ವಿರಾಟ್ ಕೊಹ್ಲಿ ಬೈ ಮಿಸ್ಟೇಕ್ ಆಗಿ ನಟಿ ಅವನೀತ್ ಕೌರ್ ಫೋಟೋಗೆ ಲೈಕ್ ಕೊಟ್ಟಿದ್ದರು. ಕೊಹ್ಲಿ ಕೊಟ್ಟ ಒಂದು ಲೈಕ್ಸ್‌ನಿಂದ ಇದೀಗ ಅವನೀತ್ ಕೌರ್ ಕಳೆದ ನಾಲ್ಕು ದಿನಗಳಲ್ಲಿ ಸರಿಸುಮಾರು 2 ಮಿಲಿಯನ್ ಫಾಲೋವರ್ಸ್ ಹೆಚ್ಚಿಸಿಕೊಂಡಿದ್ದಾರೆ.
ಕೊಹ್ಲಿ ಲೈಕ್ ಮಾಡುವ ಮೊದಲು ಅವನೀತ್ ಕೌರ್ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ 30 ಮಿಲಿಯನ್ ಆಸುಪಾಸಿನಲ್ಲಿತ್ತು. ವಿವಾದ ಶುರುವಾದ ನಾಲ್ಕೇ ದಿನದಲ್ಲಿ ಇದೀಗ ಅವನೀತ್ ಕೌರ್ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ 31.8 ಮಿಲಿಯನ್‌ಗೆ ಏರಿಕೆಯಾಗಿದೆ.