ಸಾನಿಯಾ- ಶೋಯೆಬ್ ಮಲಿಕ್ ನಡುವೆ ಅವಳು..!?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
2010 ರಲ್ಲಿ ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ  ಪಾಕಿಸ್ತಾನಿ  ಕ್ರಿಕೆಟಿಗ ಶೋಯೆಬ್ ಮಲಿಕ್ ದಂಪತಿ ವಿಚ್ಛೇದನಕ್ಕೆ ಮುಂದಾಗಿರುವ ವದಂತಿಗಳು ದಟ್ಟವಾಗಿ ಕೇಳಿಬರುತ್ತಿದೆ. ಶೋಯಬ್‌ ಮಲಿಕ್‌ ಪಾಕ್‌ ಮಾಡೆಲ್‌ ಒಬ್ಬಳ ಜೊತೆಗೆ ಇರಿಸಿಕೊಂಡ ಹೆಚ್ಚಿನ ಆತ್ಮೀಯತೆಯೇ ತಾರಾ ದಂಪತಿ ವೈವಾಹಿಕ ಜೀವನದಲ್ಲಿ ಬಿರುಗಾಳಿ ಏಳಲು ಕಾರಣವಬಾಗಿದೆ ಎನ್ನಲಾಗುತ್ತಿದೆ.

ಸಾನಿಯಾ ಮತ್ತು ಶೋಯೆಬ್ ನಡುವೆ ಪಾಕಿಸ್ತಾನಿ ನಟಿ ಹಾಗೂ ಮಾಡೆಲ್ ಆಯೇಶಾ ಒಮರ್ ಬಂದಿದ್ದೇ ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗಿದೆ ಎಂದು ಗುಸುಗುಸು ಕೇಳಿಬರುತ್ತಿದೆ.
ಝಿ ವಾಹಿನಿಯಲ್ಲಿ ಪ್ರಸಾರವಾದ ಹಿಟ್ ಶೋ ‘ಜಿಂದಗಿ ಗುಲ್ಜಾರ್ ಹೈ’ ಯಲ್ಲಿ ಫವಾದ್ ಖಾನ್ ಅವರ ಸಹೋದರಿಯಾಗಿ ನಟಿಸಿದ್ದ ಪಾಕ್‌ ನಟಿ ಆಯೇಷಾ ಒಮರ್ ಪಾಕಿಸ್ತಾನದಲ್ಲಿ ಪ್ರಖ್ಯಾತಿ ಪಡೆದ ನಟಿ.
ಕೆಲಸಮಯದ ಹಿಂದೆ ಜಾಹಿರಾತೊಂದರ ಫೋಟೋಶೂಟ್‌ ನಲ್ಲಿ ಶೋಯಬ್‌ ಹಾಗೂ ಆಯೆಶಾ ಬೋಲ್ಡ್‌ ಲುಕ್‌ ನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿಂದ ಅವರಿಬ್ಬರ ನಡುವೆ ಸಂಪರ್ಕ ಬೆಳೆದು, ಪರಸ್ಪರ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದೇ ವಿಚಾರ ಶೋಯಬ್ ಪತ್ನಿ ಸಾನಿಯಾ ಮಿರ್ಜಾ ಮುನಿಸಿಗೆ ಕಾರಣವಾಗಿದ್ದು, ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಅಯೇಶಾ ಸಹ ವಿವಾದಗಳಿಗೆ ಹೊಸಬಳೇನಲ್ಲ. ಆಕೆ ಹಲವಾರು ವಿವಾದಗಳಿಂದಲೇ ಪ್ರಸಿದ್ಧಿಗೆ ಬಂದಿದ್ದಾಳೆ. ಮೀಟೂ ಅಭಿಯಾನ ಮುನ್ನೆಲೆಯಲ್ಲಿದ್ದಾಗ ಆಯೇಷಾ ನಟ ಅಹ್ಸಾನ್ ಖಾನ್ ನೆಸಿಕೊಡುವ ಬೋಲ್ ನೈಟ್ಸ್ ವಿತ್ ಅಹ್ಸಾನ್ ಖಾನ್ ಶೋನಲ್ಲಿ ʼತಾನು ಲೈಂಗಿಕ ಕಿರುಕುಳಕ್ಕೆ ಬಲಿಯಾಗಿದ್ದೇನೆʼ ಎಂಬ ವಿಚಾರವನ್ನೂ ಬಹಿರಂಗಪಡಿಸಿದ್ದು ದೊಡ್ಡ ಸುದ್ದಿಯಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!