ನಟಿ ಹನ್ಸಿಕಾ ಮೋಟ್ವಾನಿ ಅದ್ಧೂರಿ ವಿವಾಹ, 450 ವರ್ಷ ಹಳೆಯ ಕೋಟೆಯಲ್ಲಿ ಮದುವೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ಸದ್ದಿಲ್ಲದೇ ಹಸೆಮಣೆ ಏರುತ್ತಿದ್ದಾರೆ.

ದೆಹಲಿ ಮೂಲದ ಉದ್ಯಮಿಯೊಬ್ಬರನ್ನು ಹನ್ಸಿಕಾ ಮದುವೆಯಾಗುತ್ತಿದ್ದು, ಡಿಸೆಂಬರ್‌ನಲ್ಲಿ ವಿವಾಹ ನೆರವೇರಲಿದೆ. ಬಹಳ ಅದ್ಧೂರಿಯಾಗಿ ಮದುವೆಯಾಗುತ್ತಿರುವ ಹನ್ಸಿಕಾ ಜೈಪುರದಲ್ಲಿ ಕೋಟೆಯೊಂದನ್ನು ಈಗಾಗಲೇ ಬುಕ್ ಮಾಡಿದ್ದಾರೆ ಎನ್ನಲಾಗಿದೆ. 450 ವರ್ಷಕ್ಕೂ ಹಳೆಯ ಕೋಟೆ ಇದಾಗಿದ್ದು, 10 ದಿನಗಳ ಕಾಲ ವಿವಾಹ ನೆರೆವೇರಲಿದೆ. ಈಗಾಗಲೇ ಸಾಕಷ್ಟು ತಯಾರಿ ನಡೆದಿದ್ದು, ಆಸುಪಾಸಿನ ಎಲ್ಲ ಹೊಟೇಲ್‌ಗಳನ್ನು ಹನ್ಸಿಕಾ ಬುಕ್ ಮಾಡಿದ್ದಾರೆ ಎನ್ನಲಾಗಿದೆ.

Hansika Motwani To Get Married In December: Lavish Wedding In A 450-Years  Old Fort Andಇತ್ತೀಚೆಗೆ ಯಾವ ಸಿನಿಮಾಗಳಲ್ಲಿಯೂ ಹನ್ಸಿಕಾ ಕಾಣಿಸಿಕೊಂಡಿರಲಿಲ್ಲ. ಹನ್ಸಿಕಾ ಖುದ್ದಾಗಿ ಮದುವೆ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ದೆಹಲಿ ಮೂಲದ ಉದ್ಯಮಿ ಜೊತೆ ವರ್ಷಗಳಿಂದ ಹನ್ಸಿಕಾ ಡೇಟಿಂಗ್‌ನಲ್ಲಿದ್ದರು ಎನ್ನಲಾಗಿದೆ. ಒಟ್ಟಾರೆ ಹನ್ಸಿಕಾ ಅಭಿಮಾನಿಗಳು ಖುಷಿಯಾಗಿದ್ದು, ಅವರೇ ಖುದ್ದು ಮದುವೆ ಬಗ್ಗೆ ಹೇಳಲಿ ಎಂದು ಕಾಯುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!