ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಮಗಧೀರ, ಬಾಹುಬಲಿ, ಭಜರಂಗಿ ಭಾಯ್ ಜಾನ್ ನಂತಹ ಸಖತ್ ಹಿಟ್ ಚಿತ್ರಗಳನ್ನು ಕೊಟ್ಟಿರುವ ಕೆ.ವಿ. ವಿಜಯೇಂದ್ರ ಪ್ರಸಾದ್ ಇದೀಗ ‘ಸೀತಾ’ ಅನ್ನೋ ಹೊಸ ಚಿತ್ರಕ್ಕೆ ಚಿತ್ರಕಥೆ ಬರೆಯೋಕೆ ಮುಂದಾಗಿದ್ದಾರೆ.
ಈ ಚಿತ್ರಕ್ಕೆ ಸೀತಾ ಪಾತ್ರಧಾರಿಯಾಗಿ ನಟಿ ಕರೀನಾ ಕಪೂರ್ ಗೆ ಆಫರ್ ಹೋಗಿದ್ದು, ಕರೀನಾ ಕೇಳಿದ ಸಂಭಾವನೆ ಕೇಳಿ ಸಿನಿಪ್ರಿಯರು ಶಾಕ್ ಆಗಿದ್ದಾರೆ.
ಹೌದು, ಬಹುಭಾಷೆಯಲ್ಲಿ ತೆರೆಗೆ ಬರುತ್ತಿರುವ ಸೀತಾ: ದಿ ಇನ್ಕಾರ್ನೇಷನ್ ಚಿತ್ರಕ್ಕೆ ಮರ್ಯಾದ ಪುರುಷೋತ್ತಮನ ಸತಿಯಾಗಿ ಸೀತಾ ಪಾತ್ರಕ್ಕೆ ಕರೀನಾ ಕಪೂರ್ ಖಾನ್ ನಟಿಸುವಂತೆ ಮಾತುಕತೆಯಾಗಿದೆ.
ಆದರೆ ಕರೀನಾ ಕಪೂರ್ ವೀರೇ ದಿ ವೆಡ್ಡಿಂಗ್ ಹಾಗೂ ಹನ್ಸಲ್ ಮೆಹ್ತಾ ರ ಚಿತ್ರಕ್ಕೆ ಈಗಾಗಲೇ ಕಾಲ್ ಶೀಟ್ ಕೊಟ್ಟಿದ್ದು, ಸೀತಾ ಚಿತ್ರದ ನಟಿಯಾಗಿ ಕಾಣಿಸಿಕೊಳ್ಳಲು ಬರೋಬ್ಬರಿ 12 ಕೋಟಿ ರೂ. ಸಂಭಾವನೆ ಕೇಳಿದ್ದಾರಂತೆ.
ಈ ಚಿತ್ರಕ್ಕೆ ಅಲೌಕಿಕ್ ದೇಸಾಯಿ ಆಕ್ಷನ್ ಕಟ್ ಹೇಳಲಿದ್ದು, ಇದು ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತೆರೆ ಕಾಣಲಿದೆ.