ಕ್ರಿಸ್​ಮಸ್​ ಸಂಭ್ರಮದ ಕ್ಷಣ ಹೊಸ ಯೂಟ್ಯೂಬ್​ ಚಾನೆಲ್​ ಶುರು ಮಾಡಿದ ನಟಿ ಮೇಘನಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಕ್ರಿಸ್​ಮಸ್​ (Christmas) ಹಬ್ಬದ ಕ್ಷಣ ನಟಿ ಮೇಘನಾ ರಾಜ್​ ಸರ್ಜಾ ಅವರು ಹೊಸ ಯೂಟ್ಯೂಬ್​ ಚಾನೆಲ್​ ಶುರು ಮಾಡಿದ್ದಾರೆ. ಆ ಮೂಲಕ ಅವರು ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರ ಆಗಿದ್ದಾರೆ.
ಮೊದಲ ವಿಡಿಯೋದಲ್ಲಿ ಅವರು ಈ ಬಗ್ಗೆ ಅನೌನ್ಸ್​ ಮಾಡಿದ್ದಾರೆ. ಹೊಸ ಕಾರ್ಯಕ್ಕೆ ಕೈ ಹಾಕಿರುವ ಅವರಿಗೆ ಫ್ಯಾನ್ಸ್​ ಅಭಿನಂದನೆ ತಿಳಿಸುತ್ತಿದ್ದಾರೆ. ಎಲ್ಲರಿಗೂ ಕ್ರಿಸ್​ಮಸ್​ ಹಬ್ಬದ ಶುಭ ಕೋರಿದ್ದಾರೆ​.
ಪುತ್ರ ರಾಯನ್​ ರಾಜ್​ ಸರ್ಜಾ, ತಂದೆ-ತಾಯಿಗಳಾದ ಪ್ರಮೀಳಾ ಜೋಶಾಯ್​ ಹಾಗೂ ಸುಂದರ್​ ರಾಜ್​ ಜೊತೆ ಇರುವ ವಿಡಿಯೋ ತುಣುಕನ್ನು ಮೇಘನಾ ರಾಜ್​ ಹಂಚಿಕೊಂಡಿದ್ದಾರೆ.
ಈ ಡಿಜಿಟಲ್​ ಯುಗದಲ್ಲಿ ಬಹುತೇಕ ಸೆಲೆಬ್ರಿಟಿಗಳು ತಮ್ಮ ಯೂಟ್ಯೂಬ್​ ಚಾನೆಲ್​ ಹೊಂದಿದ್ದಾರೆ. ತಮ್ಮದೇ ಸಿನಿಮಾಗಳ ಬಗ್ಗೆ ಪ್ರಚಾರ ಮಾಡಲು, ಹೊಸ ವಿಚಾರಗಳನ್ನು ತಿಳಿಸಲು, ದಿನಚರಿ ಬಗ್ಗೆ ಅಪ್​ಡೇಟ್​ ನೀಡಲು ಈ ಚಾನೆಲ್​ ಬಳಕೆ ಆಗುತ್ತದೆ. ಮೇಘನಾ ರಾಜ್​ ಕೂಡ ತಮ್ಮ ಯೂಟ್ಯೂಬ್​ ಚಾನೆಲ್​ ಮೂಲಕ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರ ಆಗುವುದಾಗಿ ಭರವಸೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!