ಸಿನಿಮಾದಿಂದ ದೂರ ಉಳಿಯಲು ಇದೇ ಕಾರಣವೆಂದ ನಟಿ ನಭಾ ನಟೇಶ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಾಲಿವುಡ್‌ ನಟಿ ನಭಾ ನಟೇಶ್ ಕೆಲ ಸಮಯದಿಂದ ಚಿತ್ರಗಳಿಂದ ದೂರ ಸರಿದ್ದು, ಈ ಕುರಿತು ಕಾರಣ ಹೇಳಿಕೊಂಡಿದ್ದಾರೆ.
2021ರ ನಂತರ ಯಾವುದೇ ಸಿನಿಮಾಗಳನ್ನು ಒಪ್ಪಿರಾದ ನಭಾ ಪ್ರತಿಕ್ರಿಯೆ ನೀಡಿದ್ದಾರೆ.

2022ರಲ್ಲಿ ನಾಟಿಗೆ ಭೀಕರ ರಸ್ತೆ ಅಪಘಾ ವಾಗಿತ್ತು. ಈ ಘಟನೆ ಬಗ್ಗೆನಭಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಸಾಕಷ್ಟು ಸಮಯದಿಂದ ನಾನು ಯಾರಿಗೂ ಎಲ್ಲಿಯೂ ಕಾಣಿಸಿಕೊಂಡಿಲ್ಲ ನಾನು ಹೇಗೆ ನಿಮ್ಮನ್ನು ಮಿಸ್ ಮಾಡಿಕೊಂಡೆ ಹಾಗೇ ನೀವು ಕೂಡ ನನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಿ ಎಂದು ಭಾವಿಸಿರುವೆ. ಕಳೆದ ವರ್ಷ ನನ್ನ ಜೀವನದ ಕಷ್ಟ ಸಮಯ ಎದುರಾಗಿತ್ತು. ಭೀಕರ ಅಪಘಾತಕ್ಕೆ ಒಳಗಾಗಿ ನಾನು ನನ್ನ ಎಡ ಭುಜದ ಮೂಳೆ ಫ್ರ‍್ಯಾಕ್ಚರ್ ಆಗಿದೆ. ಇದರಿಂದ ನಾನು ಮೂರ್ನಾಲ್ಕು ಆಪರೇಷನ್ ಮಾಡಿಸಿಕೊಂಡಿರುವೆ. ಇದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ನಾನು ನೋವು ಅನುಭವಿಸಿರುವೆ. ಈಗ ಗಾಯದಿಂದ ನಾನು ಚೇತರಿಸಿಕೊಳ್ಳುತ್ತಿರುವೆ, ಒಂದು ಹೆಜ್ಜೆ ಹಿಂದೆ ಇಟ್ಟು ಸಿನಿಮಾ ಕೆಲಸದಿಂದ ಹೊರಬಂದಿರುವೆ, ನಾನು ಅತೀ ಹೆಚ್ಚು ಇಷ್ಟ ಪಡುವ ಕೆಲಸವಿದು ಎಂದು ನಭಾ ನಟೇಶ್ ಬರೆದುಕೊಂಡಿದ್ದಾರೆ.

ಇದೀಗ ನಿಮ್ಮೆಲ್ಲರ ಪ್ರೀತಿಯಿಂದ ನಾನು ಕಮ್ ಬ್ಯಾಕ್ ಮಾಡಲು ಸಾಧ್ಯವಾಗಿದೆ. ನಾನು ಮಾಡಿರುವ ಕೆಲಸಕ್ಕೆ ನೀವು ಕೊಟ್ಟಿರುವ ಪ್ರೀತಿ ಅಪಾರ. ಈಗ ನಾನು ಚೇತರಿಸಿಕೊಂಡಿರುವೆ ಎಂದು ಖುಷಿಯಿಂದ ನಿಮ್ಮ ಜೊತೆ ಹಂಚಿಕೊಳ್ಳುತ್ತಿರುವೆ. ಮೊದಲಿಗಿಂತ ಗಟ್ಟಿಯಾಗಿ ನಿಂತಿರುವೆ, ನಿಂತುಕೊಳ್ಳುವೆ. 2023 ನಾನು ಫುಲ್ ರೆಡಿಯಾಗಿರುವೆ ಎಂದು ನಭಾ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!