spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಡಾಲಿ ಧನಂಜಯ್ ಚಿತ್ರದ ಟ್ರೈಲರ್ ನೋಡಿ ಕೊಂಡಾಡಿದ ಮೋಹಕ ತಾರೆ ರಮ್ಯಾ!

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಮೋಹಕತಾರೆ ರಮ್ಯಾ ಚಿತ್ರರಂಗದಿಂದ ದೂರ ಉಳಿದಿದ್ದರೂ ಕೂಡ ಸಿನಿಮಾದ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಇತ್ತೀಚಿಗಷ್ಟೆ ಸಿನಿಮಾಗೆ ಬರುವ ಆಸಕ್ತಿಯನ್ನೂ ತೋರಿಸಿದ್ದ ಅವರು, ಈಗ ನಟ ಡಾಲಿ ಧನಂಜಯ್ ಅಭಿನಯದ ‘ರತ್ನನ್ ಪ್ರಪಂಚ’ ಚಿತ್ರದ ಟ್ರೈಲರ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಬರದುಕೊಂಡಿರುವ ಅವರು, ನನಗೆ ನಗು ನಿಲ್ಲಿಸಲು ಸಾಧ್ಯವಾಗಿಲ್ಲ. ಈ ಸಿನಿಮಾ ನೋಡಲು ಕಾಯುತ್ತಿದ್ದೇನೆ. ಸೂಪರ್ ಧನಂಜಯ್. ಅನು ಪ್ರಭಾಕರ್​, ವೈನಿಧಿ ಜಗದೀಶ್​, ಉಮಾಶ್ರೀ, ಶ್ರುತಿ, ಅಚ್ಯುತ್​ ಕುಮಾರ್​ ಇವರೆಲ್ಲರೂ ಅದ್ಭುತ ಕಲಾವಿದರು. ನಿರ್ಮಾಪಕರಾದ ಕಾರ್ತಿಕ್​ ಮತ್ತು ಯೋಗಿ ಜಿ. ರಾಜ್​ಗೆ ಗೆಲುವು ಎಂದು ಬರೆದುಕೊಂಡಿದ್ದಾರೆ.
ಹೀರೋ, ಖಳನಾಯಕನಾಗಿ ನಟಿಸುವ ಡಾಲಿ ಧನಂಜಯ್ ಗೆ ಇತ್ತೀಚಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದ್ದು, ಸಿನಿ ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ.
ರತ್ನನ್ ಪ್ರಪಂಚ ಚಿತ್ರಕ್ಕೆ ರೋಹಿತ್ ಪದಕಿ ಆಕ್ಷನ್ ಕಟ್ ಹೇಳಿದ್ದು, ಅಜನೀಶ್ ಬಿ. ಲೋಕನಾಥ್ ಸಂಗೀತ ನೀಡಿದ್ದಾರೆ. ಇದೇ ಅ.22ರಂದು ಅಮೆಜಾನ್ ಪ್ರೈಂ ನಲ್ಲಿ ಸಿನಮಾ ತೆರೆ ಕಾಣಲಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss