ಗೂಗಲ್ ಸೀರೆ ಉಟ್ಟು ಮಿಂಚಿದ ನಟಿ ರಂಜನಿ ರಾಘವನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಟಿ ರಂಜನಿ ರಾಘವನ್ ಸದಾ ಹಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಹಂಚಿಕೊಂಡ ಫೋಟೋ ಸಾಕಷ್ಟು ಗಮನ ಸೆಳೆಯುತ್ತಿದೆ.
ನಟಿ ರಂಜನಿ ರಾಘವನ್ ಅವರು ಗೂಗಲ್ ಎಂದು ಬರೆದುಕೊಂಡಿರುವ ಸೀರೆಯನ್ನು ಉಟ್ಟಿದ್ದಾರೆ. ಈ ಫೋಟೋಗಳನ್ನು ಅವರು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ‘ಹೆಣ್ಮಕ್ಕಳ ಮನಸ್ಸು ಅರ್ಥ ಆಗಲ್ಲ ಅನ್ನೋರು Google me’ ಎಂದು ಬರೆದುಕೊಂಡಿದ್ದಾರೆ.


ರಂಜನಿ ರಾಘವನ್ ಅವರ ಫೋಟೋ ಹಾಗೂ ಕ್ಯಾಪ್ಶನ್​ ಫ್ಯಾನ್ಸ್​ಗೆ ಇಷ್ಟವಾಗಿದೆ. ಈ ಬಗ್ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸಾವಿರಾರು ಮಂದಿ ಈ ಫೋಟೋವನ್ನು ಲೈಕ್ ಮಾಡಿದ್ದಾರೆ.
‘ಕನ್ನಡತಿ’ ಧಾರಾವಾಹಿ ಮೂಲಕ ರಂಜನಿ ರಾಘವನ್ ಅವರು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇದರ ಜತೆಗೆ ಅವರು ಹಿರಿತೆರೆಯಲ್ಲೂ ಬ್ಯುಸಿ ಆಗಿದ್ದಾರೆ.
ರಂಜನಿ ರಾಘವನ್ ನಟನೆಯ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಸಿನಿಮಾ ಇತ್ತೀಚೆಗೆ ಒಟಿಟಿಯಲ್ಲಿ ರಿಲೀಸ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!