ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗಿನ ಫೇಮಸ್ ಹೀರೋಯಿನ್ ಸಾಯಿ ಪಲ್ಲವಿ ಕನ್ನಡದ ಈ ನಟನ ಜೊತೆ ಆಕ್ಟ್ ಮಾಡ್ಬೇಕು ಅನ್ನೋ ಆಸೆ ಹೊಂದಿದ್ರಂತೆ, ಯಾರು ಗೊತ್ತಾ ಆ ಹೀರೋ? ನಮ್ಮ ಶಂಕರ್‌ನಾಗ್!
ಸಾಯಿ ಪಲ್ಲವಿ ಜನಿಸುವುದಕ್ಕೂ ಎರಡು ವರ್ಷ ಮೊದಲೇ ಶಂಕರ್ ನಾಗ್ ನಿಧನ ಹೊಂದಿದ್ದರು. ಆದಾಗ್ಯೂ ಶಂಕರ್ ನಾಗ್ ಅವರ ಕೆಲಸಗಳಿಂದ ಸಾಯಿ ಪಲ್ಲವಿ ಅವರು ಪ್ರಭಾವಿತರಾಗಿದ್ದಾರೆ. ಅವರು ಈ ಮೊದಲು ಈ ವಿಚಾರವನ್ನು ಹೇಳಿಕೊಂಡಿದ್ದರು.
ಅವರ ನಟನೆಯ ‘ಗಾರ್ಗಿ’ ಚಿತ್ರ ಕನ್ನಡಕ್ಕೂ ಡಬ್ ಆಗಿತ್ತು. ಇದರ ಪ್ರಚಾರಕ್ಕಾಗಿ ಅವರು ಆ್ಯಂಕರ್ ಅನುಶ್ರೀ ಅವರ ಚಾನೆಲ್ಗೆ ಬಂದಿದ್ದರು. ಈ ವೇಳೆ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದರು. ಆಗ ಶಂಕರ್ ನಾಗ್ ಅವರನ್ನು ನೆನಪಿಸಿಕೊಂಡಿದ್ದರು.
‘ಕನ್ನಡದಲ್ಲಿ ಯಾರ ಜೊತೆಗೆ ಕೆಲಸ ಮಾಡಬೇಕು ಎನ್ನುವ ಆಸೆ ಇದೆ’ ಎಂದು ಅನುಶ್ರೀ ಅವರು ಸಾಯಿ ಪಲ್ಲವಿ ಅವರಿಗೆ ಕೇಳಿದರು. ‘ಶಂಕರ್ ನಾಗ್ ಬದುಕಿದ್ದರೆ ಅವರ ಜೊತೆ ಕೆಲಸ ಮಾಡುತ್ತಿದ್ದೆ’ ಎಂದಿದ್ದರು. ಈ ಮೂಲಕ ಶಂಕರ್ ನಾಗ್ ಮೇಲಿನ ಪ್ರೀತಿಯನ್ನು ಅವರು ವ್ಯಕ್ತಪಡಿಸಿದ್ದರು.
Soo she is legendary