ತಾಯಿಯಾಗುವ ಖುಷಿಯಲ್ಲಿ ನಟಿ ಸೋನಂ ಕಪೂರ್​: ಶುಭ ಹಾರೈಸಿದ ಬಾಲಿವುಡ್!

ಹೊಸದಿಗಂತ ಡಿಜಿಟಲ್ ಡೆಸ್ಕ್

ಬಾಲಿವುಡ್​ ನಟಿ ಸೋನಂ ಕಪೂರ್​ ಮೊದಲ ಮಗುವಿನ ನಿರೀಕ್ಷೆಯ ಖುಷಿಯಲ್ಲಿದ್ದಾರೆ. ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ ತಾನು ತಾಯಿಯಾಗಲಿರುವ ಕುರಿತು ಬರೆದುಕೊಂಡಿದ್ದಾರೆ.
ನಟಿ ಸೋನಂ ಕಪೂರ್​ ತಮ್ಮ ಪತಿ ಉದ್ಯಮಿಯಾದ ಆನಂದ್​ ಅಹುಜಾ ಅವರ ಮಡಿಲಲ್ಲಿ ಮಲಗಿರುವ ಫೋಟೊವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ‘ನಾಲ್ಕು ಕೈಗಳು, ಎರಡು ಹೃದಯ, ಒಂದು ಕುಟುಂಬ ಎಂಬ ಕ್ಯಾಪ್ಶನ್ ಬರೆದುಕೊಂಡಿದ್ದಾರೆ.
‘ನಾವು ನಿನ್ನನ್ನು ಸಾಧ್ಯವಾದಷ್ಟು ಉತ್ತಮವಾಗಿ ಬೆಳೆಸಲು ಇಷ್ಟಪಡುತ್ತೇವೆ. ನಿನ್ನ ಪ್ರತಿ ಹೆಜ್ಜೆಯಲ್ಲೂ ನಾವಿರುತ್ತೇವೆ. ಪ್ರೀತಿ ಮತ್ತು ಬೆಂಬಲ ಸದಾ ನಿನ್ನೊಂದಿಗಿರುತ್ತದೆ. ನಿನ್ನ ಆಗಮನಕ್ಕೆ ಕಾಯುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.
ಸೋನಂರ ಈ ಖುಷಿಯ ಪೋಸ್ಟ್​ಗೆ ನಟ-ನಟಿಯರು ಕಮೆಂಟ್​ ಮಾಡಿ ಶುಭ ಹಾರೈಸಿದ್ದಾರೆ.
ಸೋನಂ ಕಪೂರ್​ ಅವರು ಉದ್ಯಮಿ ಆನಂದ್ ಅಹುಜಾ ಅವರನ್ನು ಮೇ 8, 2018ರಂದು ಮುಂಬೈನಲ್ಲಿ ವಿವಾಹವಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!