ಪಿಕ್​ ಪಾಕೆಟ್​ ಮಾಡಿ ಸಿಕ್ಕಿಬಿದ್ದ ನಟಿ: ಪೊಲೀಸ್ ವಶದಲ್ಲಿ ರೂಪಾ ದತ್ತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಶ್ಚಿಮ ಬಂಗಾಳದ ನಟಿ ರೂಪಾ ದತ್ತ ಅವರನ್ನುಪಿಕ್​ ಪಾಕೆಟ್​ ಮಾಡಿದ ಆರೋಪದ ಮೇಲೆ ಕೋಲ್ಕತ ಪೊಲೀಸರು ಬಂಧಿಸಿದ್ದಾರೆ.
ಶನಿವಾರ ರಾತ್ರಿ (ಮಾರ್ಚ್​ 12) ನಡೆದ ಅಂತಾರಾಷ್ಟ್ರೀಯ ಕೋಲ್ಕತ ಪುಸ್ತಕ ಮೇಳದಲ್ಲಿ ರೂಪಾ ದತ್ತ ಪಿಕ್​ ಪಾಕೆಟ್ ಮಾಡಿದ್ದಾರೆ ಎಂದು ಹೇಳಲಾಗಿದೆ.
ಮಹಿಳೆಯೊಬ್ಬಳು ಕಸದ ಬುಟ್ಟಿಗೆ ಬ್ಯಾಗ್​ ಎಸೆಯುವುದನ್ನು ಪುಸ್ತಕ ಮೇಳಕ್ಕೆ ನಿಯೋಜನೆಗೊಂಡಿದ್ದ ಪೊಲೀಸ್​ ಸಿಬ್ಬಂದಿ ನೋಡಿದ್ದು, ತಕ್ಷಣ ಅನುಮಾನಗೊಂಡು ಮಹಿಳೆಯನ್ನು ವಿಚಾರಿಸಿದಾಗ ಆಕೆ ನಟಿ ರೂಪಾ ದತ್ತ ಎಂಬುದು ಬೆಳಕಿಗೆ ಬಂದಿದೆ.
ಆಕೆಯ ಬ್ಯಾಗ್​ನಲ್ಲಿ ಅನೇಕ ಪಾಕೆಟ್​ ಇರುವುದು ಕಂಡುಬಂದಿತ್ತು. ಒಟ್ಟು 75 ಸಾವಿರ ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ರೂಪಾ ದತ್ತ ಅವರನ್ನು ಪಿಕ್​ ಪಾಕೆಟ್​ ಆರೋಪದಲ್ಲಿ ಬಂಧಿಸಲಾಗಿದ್ದು, ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಕೆಲ ವರ್ಷಗಳ ಹಿಂದೆ ನಿರ್ದೇಶಕ ಅನುರಾಗ್​ ಕಶ್ಯಪ್​ ವಿರುದ್ಧ ಸುಳ್ಳು ಆರೋಪ ಮಾಡಿ ರೂಪಾ ದತ್ತ ಸುದ್ದಿಯಾಗಿದ್ದರು. ಕಶ್ಯಪ್​ ಅವರು ಫೇಸ್​ಬುಕ್​ ಮೂಲಕ ನನಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಮತ್ತು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಆದರೆ, ರೂಪಾ, ಅನುರಾಗ್ ಹೆಸರಿನ ಇನ್ನೊಬ್ಬ ವ್ಯಕ್ತಿಯೊಂದಿಗೆ ಚಾಟ್​ ಮಾಡುತ್ತಿದ್ದಳು ಎಂಬುದು ತಂದನಂತರದಲ್ಲಿ ವಿಚಾರಣೆಯ ಬಳಿಕ ಗೊತ್ತಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!