ಇಸ್ರೇಲ್‌ನ 2ನೇ ಅತಿದೊಡ್ಡ ‘ಹೈಫಾ’ ಬಂದರನ್ನು ಸ್ವಾಧೀನಪಡಿಸಿಕೊಂಡ ಅದಾನಿ ಗ್ರೂಪ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್‌ನ ಎರಡನೇ ಅತಿದೊಡ್ಡ ಹೈಫಾ ಬಂದರನ್ನು ಅದಾನಿ ಸಮೂಹ ಸ್ವಾಧೀನಪಡಿಸಿಕೊಂಡಿದೆ. 1.2 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯಕ್ಕೆ ಬಂದರನ್ನು ಸ್ವಾಧೀನಪಡಿಸಿಕೊಂಡಿದೆ.

ಯಹೂದಿ ರಾಷ್ಟ್ರದ ಟೆಲ್ ಅವಿವ್ ನಗರದಲ್ಲಿ ಕೃತಕ ಬುದ್ದಿಮತ್ತೆ ಪ್ರಯೋಗಾಲಯವನ್ನು ತೆರೆಯುವುದು ಸೇರಿದಂತೆ ಇತರ ಹೂಡಿಕೆ ಮಾಡುವ ನಿರ್ಧಾರದ ಭಾಗವಾಗಿ ಈ ಮೆಡಿಟರೇನಿಯನ್ ನಗರದ ಸ್ಕೈಲೈನ್‌ನ್ನು ಪರಿವರ್ತಿಸಲು ಪ್ರತಿಜ್ಞೆ ಮಾಡಿದೆ.

ಅದಾನ್ ಗ್ರೂಪ್ ಜತೆಗಿನ ಹೈಫಾ ಬಂದರು ಒಪ್ಪಂದು ಅಗಾಧವಾದ ಮೈಲಿಗಲ್ಲು. ಇದು ಉಭಯ ದೇಶಗಳ ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ಕಂಟೇನರ್‌ಗಳ ವಿಷಯದಲ್ಲಿ ಹೈಫಾ ಇಸ್ರೇಲ್‌ನ ಎರಡನೇ ಅತಿದೊಡ್ಡ ಬಂದರಾಗಿದೆ, ಪ್ರವಾಸಿ ಕ್ರೂಸ್ ಹಡಗುಗಳನ್ನು ಸಾಗಿಸುವಲ್ಲಿ ಇದು ದೇಶದ ಮೊದಲ ದೊಡ್ಡ ಬಂದರಾಗಿದೆ.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!