Friday, July 1, 2022

Latest Posts

ಅದಾನಿ ಸಮೂಹ ಸಂಸ್ಥೆಗಳ ಮೂರು ಎಫ್‌ಪಿಐ ಖಾತೆಗಳ ಮುಟ್ಟುಗೋಲು: ಷೇರು ಮೌಲ್ಯದಲ್ಲಿ ಕುಸಿತ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅದಾನಿ ಸಮೂಹ ಸಂಸ್ಥೆಗಳಲ್ಲಿ ಷೇರು ಹೊಂದಿರುವ ಮೂರು ಎಫ್‌ಪಿಐ (ವಿದೇಶಿ ಬಂಡವಾಳ ಹೂಡಿಕೆ) ಖಾತೆಗಳನ್ನು ನ್ಯಾಷನಲ್‌ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಟೆಡ್‌ (ಎನ್‌ಎಸ್‌ಡಿಎಲ್‌) ಮುಟ್ಟುಗೋಲು ಹಾಕಿಕೊಂಡಿದೆ.
ಇದರಿಂದ ಸೋಮವಾರದ ಬೆಳಗ್ಗಿನ ವಹಿವಾಟಿನಲ್ಲಿ ‘ಅದಾನಿ ಎಂಟರ್‌ಪ್ರೈಸಸ್’ ಷೇರು ಮೌಲ್ಯವು ಶೇ 25ರಷ್ಟು ಕುಸಿತ ಕಂಡಿದೆ.
ಮುಂಬೈ ಷೇರುಪೇಟೆಯಲ್ಲಿ ‘ಅದಾನಿ ಎಂಟರ್‌ಪ್ರೈಸಸ್’ ಷೇರು ಮೌಲ್ಯವು ಶೇ 24.99ರಷ್ಟು ಕುಸಿದು 1,201.10 ಆಗಿದೆ. ‘ಅದಾನಿ ಪೋರ್ಟ್ಸ್ ಆಯಂಡ್ ಸ್ಪೆಷಲ್ ಎಕಾನಮಿಕ್ ಝೋನ್’ ಷೇರು ಮೌಲ್ಯ ಶೇ 18.75ರಷ್ಟು ಕುಸಿದು 681.50 ಆಗಿದೆ.
‘ಅದಾನಿ ಗ್ರೀನ್‌ ಎನರ್ಜಿ’ ಷೇರು ಮೌಲ್ಯ ಶೇ 5ರಷ್ಟು ಇಳಿಕೆಯಾಗಿ 1,165.35 ಆಗಿದೆ. ‘ಅದಾನಿ ಟೋಟಲ್ ಗ್ಯಾಸ್’ ಷೇರು ಮೌಲ್ಯ ಶೇ 5ರಷ್ಟು ಕುಸಿದು 1,544.55 ಆಗಿದೆ. ‘ಅದಾನಿ ಟ್ರಾನ್ಸ್‌ಮಿಷನ್’ ಷೇರು ಮೌಲ್ಯ ಶೇ 5ರಷ್ಟು ಇಳಿಕೆಯಾಗಿದೆ 1,517.25 ಮತ್ತು ‘ಅದಾನಿ ಪವರ್’ ಷೇರು ಮೌಲ್ಯ ಶೇ 4.99ರಷ್ಟು ಕುಸಿದು 140.90 ಆಗಿದೆ.
ಎನ್‌ಎಸ್‌ಡಿಎಲ್‌ ಮುಟ್ಟುಗೋಲು ಹಾಕಿಕೊಂಡಿರುವ ಮೂರು ಎಫ್‌ಪಿಐ ಖಾತೆದಾರರು ಅದಾನಿ ಸಮೂಹ ಸಂಸ್ಥೆಗೆ ಸೇರಿದ ನಾಲ್ಕು ಕಂಪನಿಗಳಲ್ಲಿ ಷೇರು ಹೊಂದಿದ್ದಾರೆ.
ಈ ಎಫ್‌ಪಿಐ ಖಾತೆಗಳನ್ನು ಮೇ 31 ಹಾಗೂ ಅದಕ್ಕೂ ಮೊದಲೇ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು ಎಂದು ವರದಿಗಳಲ್ಲಿ ಉಲ್ಲೇಖವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss