ಜಿಯೋ, ಏರ್‌ಟೆಲ್‌ಗೆ ಬಿಗ್ ಶಾಕ್ ಕೊಟ್ಟ ‘ಅದಾನಿ ಗ್ರೂಪ್’!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದಲ್ಲಿ 5G ಇಂಟರ್‌ನೆಟ್ ಸೇವೆಗಳನ್ನು ಒದಗಿಸುವ ಸಲುವಾಗಿ ಕೇಂದ್ರ ರ್ಕಾರವು ಆಯೋಜಿಸಿರುವ 5ಜಿ ಸ್ಪೆಕ್ಟ್ರಂ ಹರಾಜಿಗೆ ‘ಅದಾನಿ ಗ್ರೂಪ್’ ಕೂಡಾ ಆಗಮಿಸಿದ್ದು, ಈ ಮೂಲಕ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ.
ದೇಶದ ವಿವಿಧ ವಲಯಗಳಲ್ಲಿ ಈಗಾಗಲೇ ಛಾಪುಮೂಡಿಸಿರುವ ಬಿಲಿಯನೇರ್ ಗೌತಮ್ ಅದಾನಿ ಅವರ ಒಡೆತನದ ‘ಅದಾನಿ ಗ್ರೂಪ್’ ಕೂಡ ಟೆಲಿಕಾಂ ಕ್ಷೇತ್ರಕ್ಕೆ ಆಗಮನ ಮುಖೇಶ್ ಅಂಬಾನಿಯ ರಿಲಯನ್ಸ್ ಜಿಯೋ ಮತ್ತು ಸುನಿಲ್ ಮಿತ್ತಲ್ ಅವರ ಏರ್‌ಟೆಲ್ ಗೆ ಶಾಕ್ ನೀಡಿದೆ.
ಭಾರತದಲ್ಲಿ ಜುಲೈ 26 ಶುಕ್ರವಾರದಂದು 5G ಸೇವೆಗಳನ್ನು ಒದಗಿಸುವ ಏರ್‌ವೇವ್‌ಗಳನ್ನು(ಸ್ಪೆಕ್ಟ್ರಂ) ಹರಾಜಿಗೆ ಇಡಲಾಗಿದೆ. ಈ ಹಾರಾಜಿನಲ್ಲಿ ಕನಿಷ್ಠ ನಾಲ್ಕು ಅಪ್ಲಿಕೇಶನ್‌ಗಳನ್ನು ಸಲ್ಲಿಸಲಾಗಿದ್ದು, ದೇಶದ ಪ್ರಮುಖ ಮೂರು ಖಾಸಗಿ ಕಂಪನಿಗಳಾದ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪೆನಿಗಳು ಅರ್ಜಿ ಸಲ್ಲಿಸಿವೆ. ಉಳಿದ ಒಂದು ಅರ್ಜಿಯನ್ನು ಸಲ್ಲಿಸಿರುವುದು ಯಾರು ಕುತೋಹಲಕ್ಕೆ ತೆರೆಬಿದ್ದಿದ್ದು, 5ಜಿ ಸ್ಪೆಕ್ಟ್ರಂ ಹರಾಜಿನಲ್ಲಿ ಆಸಕ್ತಿ ತೋರಿರುವ 4 ಮುಖ್ಯ ಕಂಪನಿಗಳಲ್ಲಿ ‘ಅದಾನಿ ಗ್ರೂಪ್’ ಕೂಡಾ ಒಂದು ಎಂದು ಹೇಳಲಾಗಿದೆ.
5G ಸ್ಪೆಕ್ಟ್ರಂ ಹರಾಜು ಸಮಯದ ಪ್ರಕಾರ, ಸ್ಪೆಕ್ಟ್ರಂ ಹರಾಜಿಗೆ 4 ಕಂಪನಿಗಳು ಜುಲೈ 12ರ ಒಳಗಾಗಿ ತಮ್ಮ ಮಾಲೀಕತ್ವದ ವಿವರಗಳನ್ನು ಒದಗಿಸಬೇಕಿದೆ. ಬಳಿಕ ಆಯಾ ಬಿಡ್ ಕಂಪನಿಗಳ ಪೂರ್ವ ಅರ್ಹತೆಯನ್ನು ನೋಡಲಾಗುತ್ತದೆ. ಜುಲೈ 19ರ ಒಳಗೆ ಕಂಪನಿಗಳು ಅರ್ಜಿಗಳನ್ನು ಹಿಂತೆಗೆದುಕೊಳ್ಳುವ ಅವಕಾಶವನ್ನೂ ಹೊಂದಿರುತ್ತದೆ. ಜುಲೈ 20 ರಂದು ಬಿಡ್ ಕಂಪನಿಗಳ ಹೆಸರನ್ನು ಅಧಿಕೃತಗೊಳಿಸಿ ಪ್ರಕ್ರಿಯೆಯನ್ನು ಜುಲೈ 27 ರಿಂದ ಆರಂಭಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಇನ್ನು ಈ ಹರಾಜಿನಲ್ಲಿ ವಿವಿಧ ಕಡಿಮೆ (600 MHz, 700 MHz, 800 MHz, 900 MHz, 1800 MHz, 2100 MHz, 2300 MHz), ಮಧ್ಯಮ (3300 MHz) ಮತ್ತು ಹೆಚ್ಚಿನ (26 GHz) ಆವರ್ತನ ಬ್ಯಾಂಡ್‌ಗಳಿಗೆ ಹರಾಜು ನಡೆಯಲಿದೆ ಎಂದು ತಿಳಿದುಬಂದಿದೆ.
ಆದಾನಿ ಒಡತನದ ಕಂಪೆನಿಗಳು ಪೋರ್ಟ್, ಕಲ್ಲಿದ್ದಲು, ವಿಮಾನ ನಿಲ್ದಾಣ ಇತ್ಯಾದಿ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದರೆ, ಅಂಬಾನಿಯ ರಿಲಯನ್ಸ್ ಒಡೆತನದ ಕಂಪೆನಿಗಳು ಪೆಟ್ರೋಲಿಯಂ, ಟೆಲಿಕಾಂ, ಮಾಧ್ಯಮ ಇತ್ಯಾದಿ ಕ್ಷೇತ್ರದಲ್ಲಿ ಹೂಡಿಕೆ ಮಾಡಿದೆ. ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ 5ಜಿ ಸ್ಪೆಕ್ಟ್ರಂ ಹರಾಜಿನಲ್ಲಿ ಭಾಗವಹಿಸಿದ್ದೇ ಆದಲ್ಲಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ, ಸುನಿಲ್ ಮಿತ್ತಲ್‌ರ ಭಾರ್ತಿ ಏರ್‌ಟೆಲ್ ಹಾಗೂ ವೊಡಾಫೋನ್ ಐಡಿಯಾ ಲಿಮಿಟೆಡ್‌ನಂತಹ ದೇಶದ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಪೈಪೋಟಿ ನೀಡಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!