ಬಿಲ್‌ ಗೇಟ್ಸ್‌ ಹಿಂದಿಕ್ಕಿದ ಅದಾನಿ: ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಗುರುವಾರ 115.5 ಶತಕೋಟಿ ಡಾಲರ್‌ಗಳ ಅಂದಾಜು ಆಸ್ತಿಯೊಂದಿಗೆ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ಫೋರ್ಬ್ಸ್‌ನ ರಿಯಲ್-ಟೈಮ್ ಬಿಲಿಯನೇರ್‌ಗಳ ಪಟ್ಟಿಯ ಪ್ರಕಾರ ಅವರ ನಿವ್ವಳ ಮೌಲ್ಯವು $104.6 ಶತಕೋಟಿಯಷ್ಟಿದೆ ಎನ್ನಲಾಗಿದೆ. ಇತ್ತೀಚೆಗೆ ಬಿಲ್‌ ಗೇಟ್ಸ್‌ ತನ್ನ ಸಂಪತ್ತಿನಿಂದ $20 ಶತಕೋಟಿಯನ್ನು ತನ್ನ ಲಾಭರಹಿತ ಸಂಸ್ಥೆಗೆ ದೇಣಿಗೆ ನೀಡುವುದಾಗಿ ಘೋಷಿಸಿದ ನಂತರ ಶ್ರೇಯಾಂಕದ ಪಟ್ಟಿಯಲ್ಲಿ ಅವರ ಹೆಸರು ಕುಸಿದಿದ್ದು ಅವರ ಜಾಗವನ್ನು ಗೌತಮ್‌ ಅದಾನಿ ಆವರಿಸಿಕೊಂಡಿದ್ದಾರೆ.

ಅಮೆಜಾನ್‌ನ ಜೆಫ್ ಬೆಜೋಸ್, ಬರ್ನಾರ್ಡ್ ಅರ್ನಾಲ್ಟ್ ಮತ್ತು ಲೂಯಿ ವಿಟಾನ್ ಮತ್ತು ಸ್ಪೇಸ್‌ಎಕ್ಸ್‌ನ ಎಲೋನ್ ಮಸ್ಕ್ ಅವರು $ 235.8 ಬಿಲಿಯನ್ ಮೌಲ್ಯದೊಂದಿಗೆ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಮೊದ ಮೂರು ಸ್ಥಾನಗಳಲ್ಲಿದ್ದರೆ ಅದಾನಿ ನಾಲ್ಕನೆಯವರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!