ಅದಾನಿ Vs ಹಿಂಡೆನ್‌ಬರ್ಗ್‌| ಟ್ವಿಟರ್‌ನಲ್ಲಿ ಟ್ರೆಂಡ್‌ ಆಗುತ್ತಿದೆ ‘ಇಂಡಿಯಾಸ್ಟ್ಯಾಂಡ್ಸ್‌ವಿತ್‌ಅದಾನಿ’ ಹ್ಯಾಷ್‌ಟ್ಯಾಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿದ್ದ ಭಾರತೀಯ ಉದ್ಯಮಿ ಗೌತಮ್‌ ಅದಾನಿಯವರ ಅದಾನಿ ಸಮೂಹದ ಕುರಿತಾಗಿ ಅಮೆರಿಕದ ತನಿಖಾ ಸಂಸ್ಥೆ ಹಿಂಡೆನ್‌ಬರ್ಗ್‌ ವರದಿ ಪ್ರಕಟಿಸಿದಾಗಿನಿಂದ ಅದಾನಿ ಸಮೂಹದ ಷೇರುಗಳು ನೆಲಕಚ್ಚಿದ್ದು ಅದಾನಿ ಸಮೂಹವು ಲಕ್ಷ ಕೋಟಿ ರೂಪಾಯಿಗಳ ಲೆಕ್ಕದಲ್ಲಿ ನಷ್ಟವನ್ನು ಅನುಭವಿಸಿದೆ. ಇದು ಭಾರತ ಮೇಲಿನ ಲೆಕ್ಕಾಚಾರದ ದಾಳಿ ಎಂದು ಅದಾನಿ ಸಮೂಹವು ಆರೋಪಿಸಿದ್ದರೆ, ದೇಶದ ಹೆಸರಿನಲ್ಲಿ ವಂಚನೆ ಮುಚ್ಚಿಡುವುದು ಸಾಧ್ಯವಿಲ್ಲ ಎಂದು ಹಿಂಡೆನ್‌ ಬರ್ಗ್‌ ಟೀಕಿಸಿದೆ.

ಆದರೆ ಹಿಂಡೆನ್ ಬರ್ಗ್‌ ಟೀಕೆಗಳ ಮಧ್ಯೆ ಕೆಲ ಭಾರತೀಯರು ಅದಾನಿ ಸಮೂಹದ ಪರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದು ಗೌತಮ್‌ ಅದಾನಿಯವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಳೆದ ವಾರದ ಹಿಂಡೆನ್‌ಬರ್ಗ್ ಸಂಶೋಧನಾ ವರದಿಯಿಂದ ಅದಾನಿ ಸಮೂಹದ ಷೇರುಗಳ ಒಟ್ಟು 65 ಬಿಲಿಯನ್ ಡಾಲರ್ ನಷ್ಟಕ್ಕೆ ಪ್ರತಿಕ್ರಿಯೆಯಾಗಿ ಟ್ವಿಟರ್‌ನಲ್ಲಿ ‌ʼಇಂಡಿಯಾಸ್ಟ್ಯಾಂಡ್ಸ್‌ವಿತ್‌ಅದಾನಿʼ (#IndiaStandsWithAdani) ಟ್ರೆಂಡ್‌ ಆಗುತ್ತಿದ್ದು ಟಾಪ್ ಟ್ರೆಂಡಿಂಗ್ ಹ್ಯಾಶ್‌ಟ್ಯಾಗ್‌ಗಳಲ್ಲಿ ಒಂದಾಗಿದೆ.

“ನನ್ನ ದೇಶದ ಕೋಟ್ಯಾಧಿಪತಿಯ ಬಗ್ಗೆ ನನಗೆ ಹೆಮ್ಮೆ ಇದೆ. ಭಾರತೀಯರು ಮೂರ್ಖರಾಗುವುದಿಲ್ಲ … ಭಾರತವು ಯಾವುದೇ ವಿದೇಶಿ ಶಕ್ತಿಯ ಮುಂದೆ ಬಾಗುವುದಿಲ್ಲ” ಎಂದು ಗುಜರಾತ್ ರಾಜ್ಯದ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಐಟಿ ಘಟಕದ ಸದಸ್ಯ ಮುಕುಂದ್ ಜೇತವಾ ಟ್ವೀಟ್ ಮಾಡಿದ್ದಾರೆ. “ನಾವೆಲ್ಲರೂ ಮಣ್ಣಿನ ಮಕ್ಕಳು ಎಂಬುದು ನಿಜವೆಂದು ಸಾಬೀತಾಗಿದೆ. ಹೊರಗಿನವರು ಸೃಷ್ಟಿಸಿದ ಚಂಡಮಾರುತವನ್ನು ಎದುರಿಸಲು ಭಾರತೀಯ ಬಿಜ್ ಡಯಾಸ್ಪೊರಾ ಅದಾನಿ ಜೊತೆಗೆ ನಿಂತಿದ್ದಾರೆ. #IndiaINCSupportsAdani ಎಂದು ವ್ಯಾಪಾರಿ ಹಿಮಾಂಶು ಹಿರ್ಪಾರಾ ಟ್ವಿಟ್ಟರ್ನಲ್ಲಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!