Tuesday, June 28, 2022

Latest Posts

ಕೋವಿಡ್ ಲಸಿಕೆ ಉತ್ಪಾದನೆ ಹೆಚ್ಚಿಸಲು ಕಚ್ಚಾ ವಸ್ತುಗಳ ರಫ್ತಿನ ನಿರ್ಬಂಧವನ್ನು ತೆಗೆದುಹಾಕಿ: ಅಮೆರಿಕಕ್ಕೆ ಆದಾರ್ ಪೂನವಾಲಾ ಮನವಿ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೋವಿಡ್ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ನೆರವಾಗುವಂತೆ ಕಚ್ಚಾ ವಸ್ತುಗಳ ರಫ್ತಿಗೆ ಅಮೆರಿಕ ವಿಧಿಸಿರುವ ನಿರ್ಬಂಧವನ್ನು ತೆಗೆದುಹಾಕಬೇಕಿದೆ ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಸಿಇಒ ಆದಾರ್ ಪೂನವಾಲಾ ಹೇಳಿದ್ದಾರೆ.
ಯುಎಸ್ ಅಧ್ಯಕ್ಷರ ಟ್ವಿಟ್ಟರ್ ಹ್ಯಾಂಡಲ್ ಅನ್ನು ಟ್ಯಾಗ್ ಮಾಡಿ, ಪೂನವಾಲಾ ಗೌರವಾನ್ವಿತ ಪೊಟಸ್, ಈ ವೈರಸ್ ಸೋಲಿಸುವಲ್ಲಿ ನಾವು ನಿಜವಾಗಿಯೂ ಒಂದಾಗಬೇಕಾದರೆ, ಅಮೆರಿಕದ ಹೊರಗಿನ ಲಸಿಕೆ ಉದ್ಯಮದ ಪರವಾಗಿ, ಕಚ್ಚಾ ವಸ್ತುಗಳ ರಫ್ತಿನ ನಿಷೇಧವನ್ನು ಹೊರಹಾಕುವಂತೆ ನಾನು ವಿನಮ್ರವಾಗಿ ವಿನಂತಿಸುತ್ತೇನೆ. ಇದರಿಂದ ಲಸಿಕೆ ಉತ್ಪಾದನೆಯು ಹೆಚ್ಚಾಗುತ್ತದೆ. ನಿಮ್ಮ ಆಡಳಿತವು ಸಾಕಷ್ಟು ವಿವರಗಳ ಮಾಹಿತಿ ಹೊಂದಿದೆ ಎಂದು ಹೇಳಿದ್ದಾರೆ.
ಎಸ್‌ಐಐ ಪ್ರಸ್ತುತ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಕೊರೋನಾ ವಿರೋಧಿ ಲಸಿಕೆ ಕೋವಿಶೀಲ್ಡ್ ಅನ್ನು ಉತ್ಪಾದಿಸುತ್ತಿದೆ.
ಲಸಿಕೆಯನ್ನು ಭಾರತದಲ್ಲಿ ಬಳಸುವುದು ಮಾತ್ರವಲ್ಲದೆ ಹಲವಾರು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.
ಅಧಿಕಾರಶಾಹಿ ಮತ್ತು ಸರ್ಕಾರಕ್ಕೆ ಸಂಬಂಧಿಸಿದ ಅಡಚಣೆಗಳಿಂದಾಗಿ ಎಸ್‌ಐಐ ಅಗತ್ಯವಿರುವ ಸಂಖ್ಯೆಯ ಲಸಿಕೆಗಳನ್ನು ಕಳುಹಿಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಪೂನವಾಲಾ ಹಿಂದೊಮ್ಮೆ ಒಪ್ಪಿಕೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss