ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹಾಲಿಗೆ ಚಿಟಿಕೆ ಕೇಸರಿ ಸೇರಿಸಿ ಕುಡಿಯಿರಿ‌‌.. ಒಳ್ಳೆ ನಿದ್ದೆ ಜೊತೆಗೆ ಇನ್ನೂ ಹಲವಾರು ಲಾಭ ಇದೆ..

ತುಂಬಾ ಜನಕ್ಕೆ ರಾತ್ರಿ ಹಾಲು ಕುಡಿದು ಮಲಗುವ ಅಭ್ಯಾಸವಿರುತ್ತದೆ. ಖಾಲಿ ಹಾಲು ಕುಡಿದು ಮಲಗುವ ಬದಲು ಚಿಟಿಕೆ ಕೇಸರಿ ಹಾಕಿಕೊಂಡು ಕುಡಿಯಿರಿ, ನಿದ್ರಾಹೀನತೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತದೆ. ಏನೆಲ್ಲ ಉಪಯೋಗವಿದೆ ನೋಡಿ…

ಕಣ್ಣಿನ ದೃಷ್ಟಿ:
ಹಾಲಿಗೆ ಕೇಸರಿ ಹಾಕಿಕೊಂಡು ಕುಡಿಯುವುದರಿಂದ ಕಣ್ಣಿನ ದೃಷ್ಟಿ ಸುಧಾರಿಸುತ್ತದೆ. ಕಣ್ಣು ಮಂಜಾಗುವುದು ನಿವಾರಣೆಯಾಗುತ್ತದೆ.

ನೆನಪಿನ ಶಕ್ತಿ:
ಮಕ್ಕಳಿಗೆ ಹಾಲಿಗೆ ಕೇಸರಿ ಹಾಕಿ ಕುಡಿಸಿ. ನೆನೆಪಿನ ಶಕ್ತಿ ಹೆಚ್ಚುತ್ತದೆ. ಏಕಾಗ್ರತೆ ಕೂಡ ಹೆಚ್ಚುತ್ತದೆ.

ನಿದ್ರಾ ಹೀನತೆ:
ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ ಎನ್ನುವವರು ಹಾಲಿಗೆ ಕೇಸರಿ ಹಾಕಿ ಕುಡಿಯುವುದರಿಂದ ನಿದ್ರಾಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ.

ಹೃದಯ:
ಕೇಸರಿ ಹೃದಯ ಆರೋಗ್ಯಕ್ಕೆ ಉತ್ತಮ. ಹೃದ್ರೋಗ ಸಮಸ್ಯೆಗಳಿಗು ಬರದಂತೆ ತಡೆಯುತ್ತದೆ ಕೇಸರಿ.

ಒತ್ತಡ:
ಕೇಸರಿಗೆ ಒತ್ತಡ, ಆತಂಕವನ್ನು ಕಡಿಮೆ ಮಾಡುವ ಶಕ್ತಿ ಕೂಡ ಇದೆ. ಹಾಲಿಗೆ ಕೇಸರಿ ಹಾಕಿ ಕುಡಿಯುವುದನ್ನು ರೂಢಿಸಿಕೊಳ್ಳಿ.

ಚರ್ಮ:
ಚರ್ಮ ಸಂಬಂಧಿ ಕಾಯಿಲೆಗಳನ್ನು ನಿವಾರಣೆ ಮಾಡುವ ಶಕ್ತಿ ಕೇಸರಿಗಿದೆ. ಚರ್ಮಕ್ಕೆ ಹೊಳಪು ಬರುವಂತೆ ಮಾಡುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss