ದೇಹಕ್ಕೆ ಅಗತ್ಯವಿರುವ ಪೋಷಕಾಂಶ, ಪ್ರೋಟೀನ್, ವಿಟಮಿನ್ ಗಳನ್ನು ಒದಗಿಸುವಲ್ಲಿ ಮೊಳಕೆ ಕಾಳುಗಳು ಸಹಕಾರಿಯಾಗಲಿದೆ. ಹಾಗಾಗಿ ಪ್ರತಿದಿನ ಒಮ್ಮೆಯಾದರೂ ಮೊಳಕೆಕಾಳನ್ನು ನಿಮ್ಮ ಆಹಾರದೊಂದಿಗೆ ಸೇವಿಸಿ. ಇದರಿಂದ ಏನೆಲ್ಲಾ ಲಾಭ ಇದೆ ಗೊತ್ತೆ..
ಜೀರ್ಣಕ್ರಿಯೆ: ಮೊಳಕೆ ಕಾಳಿನಲ್ಲಿ ಹೆಚ್ಚಯ ನಾರಿನಾಂಶ ಇರುತ್ತದೆ. ಇದರಿಂದ ದೇಹದಲ್ಲಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ತೂಕ ಇಳಿಕೆ: ಮೊಳಕೆ ಕಾಳನ್ನು ದಿನದಲ್ಲಿ ಒಂದು ಸಲವಾದರು ಸೇವಿಸುವುದರಿಂದ ದೇಹದಲ್ಲಿನ ಕೆಟ್ಟ ಕೊಬ್ಬನ್ನು ಕರಗಿಸಿ ತೂಕ ಕಡಿಮೆಯಾಗಲು ಸಹಕಾರಿಯಾಗಲಿದೆ.
ತ್ವಚೆ: ಮೊಳಕೆ ಕಾಳು ಸೇವಿಸುವುದರಿಂದ ಸುಕ್ಕು ತ್ವಚೆ ಅಥವಾ ವಯಸ್ಸಾದಂತೆ ಕಾಣುವ ತ್ವಚೆಯನ್ನು ದೂರ ಮಾಡುತ್ತದೆ. ಇದರಿಂದ ತ್ವಚೆಯ ಕಾಂತಿಯೂ ಹೆಚ್ಚಾಗುತ್ತದೆ.
ಹೃದಯ ಸಂಬಂಧಿ: ಮೊಳಕೆ ಕಾಳು ಸೇವಿಸುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ದೂರಗೊಳಿಸುತ್ತದೆ. ಇದರಲ್ಲಿರುವ ಒಮೇಗಾ 3 ಅಂಶವು ಕೊಲೆಸ್ಟ್ರಾಲ್ ನಿಯಂತ್ರಿಸಲು ಸಹಕಾರಿಯಾಗಲಿದ್ದು, ಸ್ಟ್ರೋಕ್ ಸೇರಿದಂತೆ ಹೃದಯ ಸಂಬಂಧಿ ಸಮಸ್ಯೆಗಳನ್ನು ದೂರ ಮಾಡುತ್ತದೆ.
ದೃಷ್ಟಿ: ಮೊಳಕೆ ಕಾಳುಗಳಲ್ಲಿನ ಆಂಟಿಆಕ್ಸಿಡೆಂಟ್ ಅಂಶವು ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ.
ಕೂದಲು: ಕೂದಲು ಉದುರುವಿಕೆ, ಬೆಳ್ಳಗಾಗುವುದನ್ನು ಮತ್ತು ದಟ್ಟನೆಯ ಕೂದಲಿಗೆ ಮೊಳಕೆ ಕಾಳು ಸಹಕಾರಿಯಾಗಲಿದೆ.