Wednesday, August 10, 2022

Latest Posts

ಬೆಳಗ್ಗೆ ನೀರಿನ ಜೊತೆ ಇವುಗಳನ್ನು ಸೇರಿಸಿ ಕುಡಿದರೆ ಡಬಲ್ ಬೆನಿಫಿಟ್ಸ್ ಗ್ಯಾರೆಂಟಿ..

ಎಲ್ಲರಿಗೂ ದಿನ ಪ್ರಾರಂಭವಾಗೋದೆ ಕಾಫಿ ಅಥವಾ ಟೀ ಕುಡಿಯುವುದರಿಂದ. ಆದರೆ ಈ ಅಭ್ಯಾಸ ಕೆಲವರಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗುತ್ತದೆ. ಹೌದು ಕೆಲವರಿಗೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಹೊಟ್ಟೆ ನೋವು, ಮಲಬದ್ಧತೆ ಕಾಡುತ್ತದೆ. ಇದಕ್ಕೆ ಉತ್ತಮ ಪರಿಹಾರ ಎಂದರೆ ನೀರು..ಹೌದು ದಿನ ಬೆಳಗ್ಗೆ ಕಾಫಿ, ಟೀ ಕುಡಿಯುವ ಮುನ್ನ ಒಂದು ದೊಡ್ಡ ಗ್ಲಾಸ್ ನ ಬಿಸಿ ನೀರನ್ನು ಕುಡಿಯೋದು ಒಳ್ಳೆಯದು.. ಹಾಗಿದ್ದರೆ ಬೆಳಗ್ಗೆ ನೀರಿನ ಜೊತೆಗೆ ಈ ಪದಾರ್ಥಗಳನ್ನು ಬೆರೆಸಿ ಕುಡಿಯಿರಿ…

ಲಿಂಬು ನೀರು: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿಗೆ ಅರ್ಧ ನಿಂಬೆ ರಸ ಹಾಗೂ ಸ್ವಲ್ಪ ಜೇನು ತುಪ್ಪ ಬೆರೆಸಿ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ದೂರ ಮಾಡುತ್ತದೆ. ಇದು ದೇಹದ ತೂಕ ಇಳಿಸಿ, ಆಂಟಿ ಆಕ್ಸಿಡೆಂಟ್ ಆಗಿ ಕೆಲಸ ಮಾಡುತ್ತದೆ.

ಗ್ರೀನ್ ಟೀ: ಇದರಲ್ಲಿನ ಆಂಟಿ ಆಕ್ಸಿಡೆಂಟ್ ಗಳು ನಮ್ಮನ್ನು ಅನೇಕ ರೋಗಗಳಿಂದ ಕಾಪಾಡಲು ಸಹಕಾರಿಯಾಗಲಿದೆ. ಇದು ತೂಕ ಇಳಿಸೋಕೆ ಮಾತ್ರವಲ್ಲದೆ ತ್ವಚೆಯ ಕಾಂತಿ ಹೆಚ್ಚಿಸಲಿದೆ.

ಆಪಲ್ ಸೈಡರ್ ವೆನಿಗರ್:  ಬಹು ಬೇಡಿಕೆಯ ಈ ವೆನಿಗರ್ ಆರೋಗ್ಯಕ್ಕೆ ಹೆಚ್ಚು ಉಪಯಕಾರಿಯಾಗಿದೆ. ಇದು ಕೆಟ್ಟ ಬ್ಯಾಕ್ಟೀರಿಯಾ ವನ್ನು ಹೋಗಲಾಡಿಸುತ್ತದೆ ಹಾಗೂ ಮಧುಮೇಹವನ್ನು ಸಮತೋಲದಲ್ಲಿ ಇರಿಸಲು ಸಹಾಯ ಮಾಡಿತ್ತದೆ. ಜೊತೆಗೆ ಹೃತು ಸಂಬಂಧಿ ಕಾಯಿಲೆಗಳಿಗೆ ಔಷಧವಾಗಲಿದೆ.

ನಿಂಬು, ಪುದೀನಾ: ಇದನ್ನ ಡೀಟಾಕ್ಸ್ ಎಂದು ಕರಿಯುತ್ತಾರೆ. ಇದು ದಿನದ ಯಾವುದೇ ಸಮಯದಲ್ಲಾದರೂ ಸೇವಿಸಬಹುದು. ನೀರಿಗೆ ಸೌತೆಕಾಯಿ, ಲಿಂಬೆ ರಸ, ಪುದೀನಾ ಎಲೆಗಳು, ಶುಂಠಿ ಹಾಕಿದರೆ ಸಿದ್ದವಾಗುತ್ತದೆ ಡೀಟಾಕ್ಸ್ ನೀರು. ಇದು ನಿಮ್ಮನ್ನು ದಿನವಿಡೀ ಚುರುಕಾಗಿ ಇರಲು ಸಹಕಾರಿಯಾಗಲಿದೆ.

ಜೀರಿಗೆ ನೀರು: ದಿನಾ ಬೆಳಗ್ಗೆ ಜೀರಿಗೆ ನೀಡು ಸೇವಿಸುವುದರಿಂದ ಹಸಿವು ಕಡಿಮೆಯಾಗುತ್ತದೆ ಮತ್ತು ತೂಕ ಇಳಿಯೋಕು ಸಹಾಯ ಮಾಡುತ್ತದೆ. ರಾತ್ರಿ ಒಂದು ಗ್ಲಾಸ್ ನೀರಿನಲ್ಲಿ ಜೀರಿಗೆಯನ್ನು ಹಾಕಿ ನೆನಸಿಡಿ. ಬೆಳಗ್ಗೆ ಎದ್ದ ನಂತರ ಜೀರಿಗೆ ಸಮೇತ ನೀರನ್ನು ಸೇವಿಸಬೇಕು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss