ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮಾಗಳಿಂತಲೂ ಟ್ವಿಸ್ಟ್ ಆಂಡ್ ಟರ್ನ್ಸ್ ಹೊಂದಿರೋ ಬಾಲಿವುಡ್ ನಟಿ ರಾಖಿ ಸಾವಂತ್ ಮ್ಯಾರೇಜ್ ಸ್ಟೋರಿ ಮತ್ತೊಂದು ತಿರುವು ಪಡೆದುಕೊಂಡಿದೆ.
ರಾಖಿ ನೀಡಿದ ದೂರಿನ ಅನ್ವಯ ಇದೀಗ ಪತಿ ಆದಿಲ್ ಖಾನ್ ಮೈಸೂರಿನ ಜೈಲಿನಲ್ಲಿದ್ದಾರೆ. ರಾಖಿ ಕೂಡ ಮರುಮದುವೆ ಬಗ್ಗೆ ಆಲೋಚನೆ ಮಾಡೋದಿಲ್ಲ. ಡಿವೋರ್ಸ್ ಕೂಡ ಕೊಡೋದಿಲ್ಲ. ಆದಿಲ್‌ಗೆ ಡಿವೋರ್ಸ್ ಕೊಟ್ಟರೆ ಬೇರೆ ಹುಡುಗಿ ಜೀವನವನ್ನೂ ಹಾಳು ಮಾಡ್ತಾನೆ ಎಂದು ರಾಖಿ ಹೇಳಿದ್ದರು.
ಇದೀಗ ಇನ್ನೊಂದು ಶಾಕಿಂಗ್ ಹೇಳಿಕೆಯನ್ನು ರಾಖಿ ನೀಡಿದ್ದು, ಆದಿಲ್ ಜೈಲ್‌ನಿಂದ ನನಗೆ ಮೆಸೇಜ್ ಮಾಡಿದ್ದಾನೆ. ಅವನಿಗೆ ನನ್ನ ಲೈಫ್‌ನಲ್ಲಿ ಬರೋದಕ್ಕೆ ಆಸೆಯಾಗಿದೆ. ಕ್ಷಮಿಸಿ ಇನ್ನೊಂದು ಅವಕಾಶ ಕೊಡು ಎಂದು ಬೇಡುತ್ತಿದ್ದಾನೆ. ಕಂಪ್ಲೆಂಟ್ ವಾಪಾಸ್ ಪಡೆದುಕೋ, ಇಬ್ಬರೂ ಆರಾಮಾಗಿ ಜೀವನ ಮಾಡಿಕೊಂಡು ಇರೋಣ ಅಂತಿದ್ದಾನೆ. ಆದರೆ ನಾನು ಇದಕ್ಕೆ ಬಗ್ಗುವ ಹೆಣ್ಣಲ್ಲ. ಅವನು ನನ್ನ ಮೇಲೆ ಹಲ್ಲೆ ಮಾಡಿದ್ದಾನೆ, ಮಾನಸಿಕವಾಗಿ ನೋವು ನೀಡಿದ್ದಾನೆ, ಮುಸ್ಲಿಂ ಆಗಿ ಪರಿವರ್ತನೆ ಆದರೂ ನನ್ನನ್ನು ದೂರ ತಳ್ಳಿದ್ದಾನೆ. ಕೋರ್ಟ್‌ನಲ್ಲಿ ನನ್ನ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ತೇನೆ, ಮದುವೆಯನ್ನು ನಿಭಾಯಿಸುತ್ತೇನೆ ಎಂದು ಬರೆದು ಕೊಡಲಿ ಎಂದಿದ್ದಾರೆ.
ಮೃತಪಟ್ಟ ನನ್ನ ತಾಯಿ ವಾಪಾಸ್ ಬರ‍್ತಾರಾ? ಆದಿಲ್ ಅವರನ್ನು ಕರೆದುಕೊಂಡು ಬರೋದಕ್ಕೆ ಸಾಧ್ಯವಾ? ಇಲ್ಲ ತಾನೆ, ನಾನು ಆತನನ್ನು ಕ್ಷಮಿಸೋದಿಲ್ಲ ಎಂದು ರಾಖಿ ಹೇಳಿದ್ದಾರೆ.