ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದೆ ಆದಿಪುರುಷ್ ಟ್ರೈಲರ್- ವಿಎಫ್ಎಕ್ಸ್ ಅತಿ ಕಳಪೆ ಅಂತಿದ್ದಾರೆ ನೋಡುಗರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎರಡು ವರ್ಷಗಳಿಂದ ಚಾತಕ ಪಕ್ಷಿಯಿಂತೆ ಕಾಯುತ್ತಿದ್ದ ಪ್ರಭಾಸ್ ಅಭಿಮಾನಿಗಳಿಗೆ ‘ಆದಿಪುರುಷ್’ ಚಿತ್ರತಂಡ ಅಂತೂ ನಿನ್ನೆ ಟೀಸರ್‌ ಬಿಡುಗಡೆ ಮಾಡುವ ಮೂಲಕ ಖುಷಿ ಕೊಟ್ಟಿದ್ದಾರೆ. ಅಯೋಧ್ಯೆಯಲ್ಲಿ ನಡೆದ ಅದ್ಧೂರಿ ಆದಿಪುರುಷ್ ಕಾರ್ಯಕ್ರಮದಲ್ಲಿ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ. ಬಾಲಿವುಡ್ ನಿರ್ದೇಶಕ ಓಂ ರಾವುತ್ ನಿರ್ದೇಶನದ ರಾಮಾಯಣ ಆಧಾರಿತ ಚಿತ್ರದಲ್ಲಿ ರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿಸನನ್ ಮತ್ತು ರಾವಣಾಸುರನಾಗಿ ಸೈಫ್ ಅಲಿಖಾನ್ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಆದರೆ ಈ ಟೀಸರ್ ವಿಎಫ್‌ಎಕ್ಸ್‌ಗೆ ಸಂಬಂಧಿಸಿದ್ದು ಮತ್ತು ಇದು ಕಾರ್ಟೂನ್ ಚಲನಚಿತ್ರದಂತೆ ಭಾಸವಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ಟೀಕೆಗಳು ಶುರುವಾಗಿವೆ.

ಟೀಸರ್ ನೋಡಿದ ಅಭಿಮಾನಿಗಳು ಮಾತ್ರ ಇದೊಂದು ಟಾಯ್ ಸಿನಿಮಾ, ಕಾರ್ಟೂನ್‌ನಂತಿದ ಎಂದು ವ್ಯಂಗ್ಯವಾಡುತ್ತಿದ್ದಾರೆ. ನಿರ್ದೇಶಕ ಓಂ ರಾವುತ್ ಅಂತೂ ತೀವ್ರ ಟೀಕೆ ಮತ್ತು ಟ್ರೋಲ್‌ಗೆ ಒಳಗಾಗಿದ್ದಾರೆ. ರಾಮಾಯಣದ ಕಥೆ ಎಂದು ಶೂಟಿಂಗ್‌ ಇಷ್ಟು ಬೇಗ ಮುಗಿಸಿದಾಗಲೇ ನಾವು ಅರ್ಥ ಮಾಡಿಕೊಳ್ಳಬೇಕಿತ್ತು. ಸಿನಿಮಾ ಏನಾದ್ರೂ ಸಂಪೂರ್ಣ ಗ್ರಾಫಿಕ್ಸ್ ಸಿನಿಮಾ ಆದರೆ ಮಾತ್ರ ನಿರ್ದೇಶಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ.

ಈ ಟೀಸರ್ ನೋಡುತ್ತಿದ್ದರೆ ರಜನಿಕಾಂತ್ ಅಭಿನಯದ ಕೊಚಾಡಿಯನ್ ಸಿನಿಮಾ ನೆನಪಾಗುತ್ತದೆ, ಕೆಲವು ದೃಶ್ಯಗಳು ಕಿಂಗ್ ಕಾಂಗ್ ಅಂತಹ ಸಿನಿಮಾಗಳನ್ನು ನೆನಪಿಸುತ್ತದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಇದು ಮಕ್ಕಳ ಸಿನಿಮಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಈ ಟ್ರೋಲ್‌ಗಳಿಗೆ ನಿರ್ದೇಶಕ ಓಂ ರಾವುತ್ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಚಿತ್ರ 2023 ರ ಸಂಕ್ರಾಂತಿಯಂದು ಬಿಡುಗಡೆಯಾಗಲಿದೆ.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!