Monday, August 8, 2022

Latest Posts

ಆದಿಶಕ್ತಿ ಮಹದೇವಮ್ಮ ದೇವಾಲಯ ಧ್ವಂಸ: ಆಡಳಿತ ಮಂಡಳಿ ಆಕ್ರೋಶ

ದಿಗಂತ ವರದಿ ಮೈಸೂರು:

ನಮಗೆ ಯಾವುದೇ ಮಾಹಿತಿಯನ್ನು ನೀಡಿದೆ ಏಕಾಏಕಿ ಬಂದು ನಮ್ಮ ಗ್ರಾಮದಲ್ಲಿರುವ ಪುರಾತನ ಆದಿಶಕ್ತಿ ಮಹದೇವಮ್ಮ ಹಾಗೂ ಭೈರವೇಶ್ವರ ದೇವಸ್ಥಾನವನ್ನು ಅಧಿಕಾರಿಗಳು ಜೆಸಿಬಿ ಯಂತ್ರಗಳಿದ ಧ್ವಂಸ ಮಾಡಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ನಮ್ಮ ಮೇಲೆ ಕೇಸ್ ಹಾಕುವ ಬೆದರಿಕೆಯನ್ನು ಹಾಕಿದರು ಎಂದು ಹುಚ್ಛಗಣಿ ಗ್ರಾಮದ ಗ್ರಾಮದ ಮುಖಂಡ ಹಾಗೂ ಆದಿಶಕ್ತಿ ಮಹದೇವಮ್ಮ ದೇವಾಲಯದ ಆಡಳಿತ ಮಂಡಳಿಯ ಸದಸ್ಯ ನರಸಿಂಹೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ನಂಜನಗೂಡು ತಾಲೂಕಿನ ಹುಚ್ಚಗಣಿ ಗ್ರಾಮದ ಆದಿ ಶಕ್ತಿ ಮಹದೇವಮ್ಮ ದೇವಾಲಯ ಧ್ವಂಸಗೊಳಿಸಿರುವುದನ್ನ ವಿರೋಧಿಸಿ ಹಿಂದು ಜಾಗರಣ ವೇದಿಕೆಯಿಂದ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು,
ದೇವಸ್ಥಾನವಿದ್ದ ಸ್ಥಳಕ್ಕೆ 800 ವರ್ಷದ ಇತಿಹಾಸ ಇದೆ. ಸುಮಾರು 8-10 ತಲೆ ಮಾರಿನಿಂದ ನಾವು ನೋಡಿಕೊಂಡು ಬಂದಿದ್ದೇವೆ. ಮೊದಲಿಗೆ 30 ಕುಲ ಅಲ್ಲಿ ಇದ್ದವು. ಆಗಿಂದಲೂ ನ್ಯಾಯ ಸಮ್ಮತವಾಗಿ ನಡೆದುಕೊಂಡು ಬಂದಿದ್ದೇವೆ ಎಂದರು.
ಹುಚ್ಚಗಣಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ದೆಹಲಿಯಲ್ಲಿ ಹೆಸರು ಮಾಡಿದೆ. ದೆಹಲಿಯಲ್ಲಿ ಪ್ರಧಾನಿ ಕೊರೋನಾ ಸೋಂಕು ತಡೆಯಲ್ಲಿ ಮೊದಲು ಎಂದು ಪ್ರಶಸ್ತಿ ಕೊಟ್ಟಿದ್ದಾರೆ. ಮೊದಲು ಮಹದೇವಮ್ಮ ದೇವಸ್ಥಾನ ಒಬ್ಬ ವ್ಯಕ್ತಿ ಮಾತ್ರ ಪೂಜೆ ಮಾಡುವಂತೆ ಇತ್ತು. ನಂತರ ನಮ್ಮ ಗ್ರಾಮದ ಜನ ಒಗ್ಗೂಡಿ ಕ್ಷೇತ್ರ ಜೀರ್ಣೋದ್ಧಾರ ಮಾಡಿದ್ದೇವೆ. ಸುಮಾರು 60 ಲಕ್ಷ ಹಣ ದಾನಿಗಳಿಂದ ಪಡೆದು 1996 ರಿಂದ ದೇವಾಲಯ ಜೀರ್ಣೋದ್ಧಾರ ಮಾಡಿದ್ದೇವೆ. ಆಗ ದೇವಾಲಯ ರಸ್ತೆಗೆ ತೊಂದರೆ ಇಲ್ಲ ಅಂತ ತಹಶಿಲ್ದಾರ್ ವರದಿ ಕೊಟ್ಟಿದ್ದರು.
ಸೆಪ್ಟೆಂಬರ್ 1 ರಂದು ನಾವು ಕೊಂಡೋತ್ಸವ ಮಾಡಿದ್ದೇವು. ಆದರೆ ಸೆಪ್ಟೆಂಬರ್ 8 ರಂದು ಅಧಿಕಾರಿಗಳು ಯಾವುದೇ ಮಾಹಿತಿ ಕೊಡದೆ ಜೆಸಿಬಿ ಯಂತ್ರಗಳೊAದಿಗೆ ಸ್ಥಳಕ್ಕೆ ಬಂದು ದೇವಾಲಯ ಹೊಡೆಯಲು ಮುಂದಾದರೂ, ನಾವೆಷ್ಟೇ ಬೇಡಿಕೊಂಡರೂ, ಕಾಲಾವಕಾಶ ಕೊಡಲಿಲ್ಲ, ಅಡ್ಡಿಪಡಿಸುತ್ತಿದ್ದೀರಿ, ನಾವು ನಿಮ್ಮ ಮೇಲೆ ಕೇಸ್ ಹಾಕಿ ಜೈಲಿಗೆ ಕಳುಹಿಸುತ್ತೇವೆ, ಲಾಠಿ ಚಾರ್ಜ್ ಮಾಡುತ್ತೇವೆ ಎಂದು ಬೆದರಿಕೆ ಹಾಕಿದರು. ಪೊಲೀಸರ ಕಾವಲಿನಲ್ಲಿ ದೇವಸ್ಥಾನವನ್ನು ಧ್ವಂಸ ಮಾಡಿದರು ಎಂದು ಅಂದು ನಡೆದ ಘಟನೆಯನ್ನು ವಿವರಿಸಿದರು. ಈಗ ಅಲ್ಲಿರುವ ವೀರಗಲ್ಲುಗಳು 2 ಸಾವಿರ ವರ್ಷಗಳ ಇತಿಹಾಸ ಹೇಳುತ್ತಿವೆ. ಹಾಗಾಗಿ ಸರ್ಕಾರವೇ ಒಡೆದು ಹಾಕಿರುವ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡಿಕೊಡಬೇಕೆಂದು ಎಂದು ಒತ್ತಾಯಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss