Monday, July 4, 2022

Latest Posts

ವಿಧಾನಸಭೆ ಅಧಿವೇಶನ ಅನಿರ್ಧಿಷ್ಟಾವಧಿಗೆ ಮುಂದೂಡಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಳಗಾವಿಯಲ್ಲಿ ನಡೆದ ವಿಧಾನಸಭೆ ಅಧಿವೇಶನ ಅನಿರ್ಧಿಷ್ಟಾವಧಿಗೆ ಮುಂದೂಡಿಕೆಯಾಗಿದ್ದು, ಈ ಮೂಲಕ ಕಲಾಪ ಇಂದಿಗೆ ಮುಕ್ತಾಯವಾಗಿದೆ.
ಸ್ವೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅಧಿವೇಶನ ಅನಿರ್ಧಿಷ್ಟಾವಧಿಗೆ ಮುಂದೂಡಿಕೆ ಮಾಡಿದ್ದು, ಸದನಕ್ಕೆ 8 ಸದಸ್ಯರು ಗೈರಾಗಿದ್ದರು. ಒಟ್ಟು ಹಾಜರಾತಿ 73% ಇತ್ತು. ಸದಸ್ಯರ ಉತ್ಸಾಹ ಈ ಅಂಕಿ ಅಂಶ ತೋರಿಸುತ್ತದೆ. 5,000 ಜನ ಪ್ರೇಕ್ಷಕರ ಗ್ಯಾಲರಿಯಲ್ಲಿ ಬಂದು ಕುಳಿತಿದ್ದಾರೆ.
ಒಟ್ಟು ಸದನ 52 ಗಂಟೆ ಕಾಲ ನಡೆದಿದೆ. ಈ ವರ್ಷ ಒಟ್ಟಾರೆ 40 ದಿನ ಅಧಿವೇಶನ ನಡೆಸಿದಂತಾಗಿದೆ. 149 ಪ್ರಶ್ನೆಗಳಿಗೆ ಸರ್ಕಾರ ಉತ್ತರ ಕೊಡಲಾಗಿದೆ. ಆದ್ರೆ, ನಿಯಮಾವಳಿ, ಕಾಲಮಿತಿಯಿಂದ ಹೆಚ್ಚಿನವರಿಗೆ ಅವಕಾಶ ಸಿಕ್ಕಿಲ್ಲ.ಒಂದು ವಾರ ಕಲಾಪ ನಡೆಸುಂತೆ ಶಾಸಕರು ಒತ್ತಾಯ ಮಾಡಿದ್ದರು. ಮುಂದಿನ ಅಧಿವೇಶನದಲ್ಲಿ ಹೆಚ್ಚು ದಿನ ಕಲಾಪ ನಡೆಸುತ್ತೇವೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss