ಅಡ್ಜೆಸ್ಟ್ ರಾಜಕಾರಣ ನನ್ನ ಜೀವನದಲ್ಲೇ ಇಲ್ಲ, ಬಿಜೆಪಿ ತಾಯಿಗೆ ಸಮಾನ: ಜಿ.ಸೋಮಶೇಖರ್ ರೆಡ್ಡಿ

ಹೊಸದಿಗಂತ ವರದಿ, ಬಳ್ಳಾರಿ:

ಬಿಜೆಪಿ ಅಭ್ಯರ್ಥಿ ಜಿ.ಸೋಮಶೇಖರ್ ರೆಡ್ಡಿ ಕೊನೆ ಗಳಿಗೆಯಲ್ಲಿ ಸೈಲೆಂಟ್ ಆದ್ರು, ಸಹೋದರನ ಕೆಆರ್ ಪಿಪಿ ಪಕ್ಷದೊಂದಿಗೆ ಅಡ್ಜೆಸ್ಟ್ ಮೆಂಟ್ ಮಾಡಿಕೊಂಡಿದ್ದಾರೆ ಎಂದು ಕೆಲವರು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ, ಇದು ಸಂಪೂರ್ಣ ಶುದ್ದ ಸುಳ್ಳು, ಅಡ್ಜೆಸ್ಟ್ ಮೆಂಟ್ ರಾಜಕಾರಣ ನನ್ನ ಜಾಯಮಾನದಲ್ಲೇ ಇಲ್ಲ, ಆ ಸಂಸ್ಕೃತಿಯೂ ನನ್ನದಲ್ಲ, ವಿರೋಧಿಗಳು ಸೃಷ್ಟಿದ ಷಡ್ಯಂತ್ರ ಇದು, ನಗರ ಕ್ಷೇತ್ರದ ಮತದಾರರು ಇದಕ್ಕೆ ಕಿವಿಕೊಡಬೇಡಿ, ಪ್ರತಿಯೋಬ್ಬರೂ ಅಭಿವೃದ್ಧಿ ನಿರೀಕ್ಷಿಸಿ ಬಿಜೆಪಿ ಬೆಂಬಲಿಸಿ ಆರ್ಶಿವಾದಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ಜಿ.ಸೋಮಶೇಖರ್ ರೆಡ್ಡಿ ಮನವಿ ಮಾಡಿದರು.

ನಗರದ ಬಿಜೆಪಿ ಹಳೇ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಬಿಜೆಪಿ ಪಕ್ಷ ನನ್ನ ತಾಯಿ ಇದ್ದಂತೆ, ಬಿಜೆಪಿ ರಾಜಕೀಯ ಜನ್ಮ ನೀಡಿದ ಪಕ್ಷ, ಎರಡು ಬಾರಿ ಶಾಸಕ, ಕೆಎಂಎಫ್ ಅಧ್ಯಕ್ಷರನ್ನಾಗಿ ಮಾಡಿರುವುದು ನಮ್ಮ ಪಕ್ಷ, ಕಳೆದ 2008ರಲ್ಲಿ ಟಿಕೇಟ್ ನೀಡುವ ವೇಳೆ ಬಿ.ಎಸ್.ಯಡಿಯೂರಪ್ಪ ಅವರೇ ಬಳ್ಳಾರಿ ನಗರ ಕ್ಷೇತ್ರದಿಂದ ನಿಮ್ಮನ್ನು ಬಿಟ್ಟರೇ ಮತ್ತ್ಯಾರು ಇದ್ದಾರೆ ಎಂದಿದ್ದರು, ಬಿಜೆಪಿ ನನಗೆ ಎಲ್ಲವೂ ನೀಡಿದೆ, ಹೀಗಿರುವಾಗ ತಾಯಿ ಪಕ್ಷಕ್ಕೆ ದ್ರೋಹ ಬಗೆಯಲು ಸಾಧ್ಯವೇ, ಅಡ್ಜೆಸ್ಟ್ ಮೆಂಟ್ ಮಾಡಿಕೊಂಡಿದ್ದಾರೆ ಎಂದು ಕೆಆರ್ ಪಿಪಿ ಪಕ್ಷದವರೇ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ, ಜನರು ಇದಕ್ಕೆ ಕಿವಿಕೊಡಬೇಡಿ, ನನ್ನ ಕೊನೆ ಉಸಿರು ಇರೋವರೆಗೂ ಬಿಜೆಪಿಯಲ್ಲೇ ಇರುವೆ, ರಾಜಕೀಯ ಜೀವನ ಇದೇ ಪಕ್ಷದಲ್ಲಿ ಹೊರತು ಬೇರೆ ಪಕ್ಷದ ಬಾಗಿಲು ತಟ್ಟುವ ಜಾಯಮಾನ ನನ್ನದಲ್ಲ, ನಾನು ಬಿಜೆಪಿಯಲ್ಲೇ ಇರುವೆ, ನಾನೇ ಗೆಲ್ಲುವೆ, ನಮ್ಮ ಸರ್ಕಾರವೇ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೆಲಿಕಾಪ್ಟರ್ ನಲ್ಲಿ ತಿರುಗಾಡೋರಿಗೆ ರಸ್ತೆ ಅಭಿವೃದ್ಧಿ ಮಾಡಲು ಹೇಗೆ ಸಾಧ್ಯ,ಬ್ಲಾಕ್ ಮೇಲ್ ರಾಜಕಾರಣ ನನ್ನಲ್ಲಿಲ್ಲ, ಅದೇನಿದ್ದರೆ ಫುಟ್ ಬಾಲ್ ಪಕ್ಷದವರಿಗೆ, ಪಾಲಿಕೆ ಸದಸ್ಯರಾದ ಕೋನಂಕಿ ತಿಲಕ್, ಅಶೋಕ್ ಅವರು ಪಕ್ಷ ತೊರೆದಿದ್ದು, ಜನಾರ್ಧನರೆಡ್ಡಿ, ಅವರಿಗೆ ಬೆದರಿಕೆ ಹಾಕಿರಬಹುದು, ಹಣದ ಆಮೀಷ ತೋರಿಸಿರಬಹುದು, ಅದಕ್ಕಾಗಿ ಪಕ್ಷ ಬಿಟ್ಟಿದ್ದಾರೆ, ಕೆಆರ್ ಪಿಪಿ ಅವರಿಗೆ ಸೋಲಿನ ಭಯ ಕಾಡುತ್ತಿದೆ, ಇದರಿಂದ ಈ ಕೃತ್ಯಕ್ಕೆ ಮುಂದಾಗಿದ್ದಾರೆ. ಮಾಜಿ ಸಚಿವ ಎಂ.ದಿವಾಕರ್ ಬಾಬು ಜನಾರ್ಧನರೆಡ್ಡಿ ಮಧ್ಯೆ ಸಾಕಷ್ಟು ವೈ ಮನಸ್ಸುಗಳಿದ್ದವು, ಅಂತವರಿಬ್ಬರು ಒಂದಾಗಿರುವುದು ಅಸಾಧ್ಯ ಎನ್ನುವಂತಾಗಿದೆ, ಸೋಲಿನ ಹತಾಷೆಯಲ್ಲಿರುವ ಜನಾರ್ಧನರೆಡ್ಡಿ ಇವರ ಮೇಲೆ ಎಷ್ಟು ಒತ್ತಡ ಹಾಕಿರಬಹುದು. ಬಳ್ಳಾರಿ ನಗರ ಕ್ಷೇತ್ರದ ಚುನಾವಣೆಯಲ್ಲಿ ನನ್ನ ಎದುರಾಳಿ ಕಾಂಗ್ರೆಸ್, ಕೆಆರ್ ಪಿಪಿ ನನಗೆ ಎದುರಾಳಿಯೇ ಅಲ್ಲ, ನನ್ನ ಹಾಗೂ ಕಾಂಗ್ರೆಸ್ ಮಧ್ಯೆ ಒಳ್ಳೆಯ ಫೈಟ್ ಬಿದ್ದಿದೆ, ಸಹೋದರ ಜನಾರ್ಧನರೆಡ್ಡಿ ನನಗೆ ಕೈಕೊಟ್ಟಿರಬಹುದು, ಸಚಿವ ಶ್ರೀರಾಮುಲು ಅಣ್ಣನ ಸ್ಥಾನ ತುಂಬಿದ್ದಾನೆ. ನಗರ ಕ್ಷೇತ್ರದ ಮತದಾರರು ಅಭಿವೃದ್ಧಿ ನಿರೀಕ್ಷಿಸಿ ಪ್ರತಿಯೋಬ್ಬರೂ ಬಿಜೆಪಿ ಬೆಂಬಲಿಸಿ ಆರ್ಶಿವಾದಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಎಮ್ಮೆಲ್ಸಿ ವೈ.ಎಂ.ಸತೀಶ್, ಮುಖಂಡರಾದ ಅನೀಲ್ ನಾಯ್ಡು, ಎಸ್.ಮಲ್ಲನಗೌಡ, ಮಹೇಶ್ವರ ಸ್ವಾಮಿ, ಜಡೇಗೌಡ, ವೀರಶೇಖರ ರೆಡ್ಡಿ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!