ದತ್ತು ಮಕ್ಕಳು ಅನುಕಂಪದ ನೌಕರಿ ಪಡೆಯಬಹುದು: ಹೈಕೋರ್ಟ್ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ದತ್ತು ಮಕ್ಕಳು ಅನುಕಂಪದ ನೌಕರಿ ಪಡೆಯಬಹುದು ಎಂದು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ದತ್ತು ಪುತ್ರನಿಗೆ ಅನುಕಂಪದ ಆಧಾರದ ಉದ್ಯೋಗ ಲಭ್ಯವಾಗುವಿಲ್ಲ ಎಂದು ಏಕ ಸದಸ್ಯ ಪೀಠ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂಣದರಾಜು ಮತ್ತು ನ್ಯಾಯಮೂರ್ತಿ ಜಿ ಬಸವರಾಜು ಪೀಠ ಈ ಆದೇಶ ಹೊರಡಿಸಿದೆ.

ನೈಸರ್ಗಿಕ ಮಕ್ಕಳಿಗೂ ದತ್ತು ಮಕ್ಕಳಿಗೂ ವ್ಯತ್ಯಾಸವಿಲ್ಲ. ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆಯುವ ಸಂದರ್ಭದಲ್ಲಿ ದತ್ತು ಮಕ್ಕಳು ಹಾಗೂ ಸ್ವಂತ ಮಕ್ಕಳು ಎಂಬ ವ್ಯತ್ಯಾಸ ನೋಡಿದಲ್ಲಿ ದತ್ತು ತೆಗೆದುಕೊಳ್ಳುವ ಉದ್ದೇಶ ಈಡೇರುವುದಿಲ್ಲ ಎಂದು ಕೋರ್ಟ್ ತಿಳಿಸಿದೆ.

ಬನಹಟ್ಟಿಯ ಜೆಎಂಎಫ್ ಸಿ ಕೋರ್ಟ್ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಅವರ ಕಚೇರಿಯಲ್ಲಿ ವಿನಾಯಕ ಎಂ ಮುತ್ತಟ್ಟಿ ಎಂಬುವವರು ಗ್ರೂಪ್ ಡಿ ನೌಕರ ನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮುತ್ತಟ್ಟಿ ಅವರು 2011 ರಲ್ಲಿ ಗಿರೀಶ್ ಅವರನ್ನು ದತ್ತು ತೆಗೆದುಕೊಂಡಿದ್ದರು. ಆದರೆ 2018 ರಲ್ಲಿ ವಿನಾಯಕ ಎಂ ಮುತ್ತಟ್ಟಿ ನಿಧನರಾಗಿದ್ದರು.

ಅಭಿಯೋಜನೆ ವಿಭಾಗದಲ್ಲಿ ವಿನಾಯಕ ಮುತ್ತತ್ತಿ ದಲಾಯತ್ ಆಗಿದ್ದರು. 2010ರಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಅನುಕಂಪದ ನೌಕರರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ದತ್ತು ಪುತ್ರನೆಂಬ ಕಾರಣಕ್ಕೆ ಅನುಕಂಪದ ನೌಕರಿ ನಿರಾಕರಿಸಲಾಗಿತ್ತು. ವಿಚಾರಣೆ ಆಲಿಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ 12 ವಾರದಲ್ಲಿ ಅನುಕಂಪದ ಹುದ್ದೆ ಕೋರಿದ ಅರ್ಜಿಯನ್ನು ಪರಿಗಣಿಸಿ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

 

ಬನಹಟ್ಟಿಯ ಜೆಎಂಎಫ್ ಸಿ ಕೋರ್ಟ್ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಅವರ ಕಚೇರಿಯಲ್ಲಿ ವಿನಾಯಕ ಎಂ ಮುತ್ತಟ್ಟಿ ಎಂಬುವವರು ಗ್ರೂಪ್ ಡಿ ನೌಕರ ನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮುತ್ತಟ್ಟಿ ಅವರು 2011 ರಲ್ಲಿ ಗಿರೀಶ್ ಅವರನ್ನು ದತ್ತು ತೆಗೆದುಕೊಂಡಿದ್ದರು. ಆದರೆ 2018 ರಲ್ಲಿ ವಿನಾಯಕ ಎಂ ಮುತ್ತಟ್ಟಿ ನಿಧನರಾಗಿದ್ದರು.ಅವರ ಹುದ್ದೆಯನ್ನು ಅನುಕಂಪದ ಆಧಾರದ ಮೇಲೆ ನೀಡುವಂತೆ ಅವರ ದತ್ತುಪುತ್ರ ಗಿರೀಶ್ ಪ್ರಾಸಿಕ್ಯೂಷನ್ ಇಲಾಖೆಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ದತ್ತು ಪುತ್ರನಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಕೊಡುವುದಿಲ್ಲ ಎಂದು ಹೇಳಿ ಅರ್ಜಿ ತಿರಸ್ಕರಿಸಿತ್ತು, ಇದನ್ನು ಪ್ರಶ್ನಿಸಿ ಗಿರೀಶ್ ಹೈಕೋರ್ಟ್ ಮೊರೆ ಹೋಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!