spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಾವ್ಹ್..ಸ್ಕೂಬಾ ಡೈವರ್ ಗೆ ಪ್ರೀತಿಯ ಅಪ್ಪುಗೆ ಕೊಟ್ಟ ಈ ಸಮುದ್ರ ಜೀವಿ: ಇಲ್ಲಿದೆ ಮನಮುದಗೊಳಿಸುವ ದೃಶ್ಯ

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:
ಕಳೆದ 2 ದಶಕಗಳಿಂದ ಸಾಗರದಾಳದಲ್ಲೇ ಹಲವಾರು ವಿಸ್ಮಯ ಅನ್ವೇಷಣೆ ಮಾಡುತ್ತಿರುವ ಖ್ಯಾತ ಸ್ಕೂಬಾ ಡ್ರೈವರ್ ಬೆನ್ ಬರ‍್ವಿಲ್ಲೆಗೆ ಒಂದು ಅಚ್ಚರಿಯ ಅನುಭವವಾಗಿದೆ.
ಏನಂತೀರಾ? ಅಟ್ಲಾಂಟಿಕ್ ಸಾಗರದ ನಾರ್ತ್‌ ಸಮುದ್ರದಲ್ಲಿ ಸ್ಕೂಬಾ ಡೈವ್ ಮಾಡುವಾಗ ಬೆನ್ ಅವರಿಗೆ ಅಚ್ಚರಿಯಂತೆ ಬೂದು ಬಣ್ಣದ ನೀರುನಾಯಿ (ಸೀಲ್) ಕಣ್ಣೆದುರು ಪ್ರತ್ಯಕ್ಷವಾಗಿದೆ.
ಇದು ಮನುಷ್ಯನಿಗೆ ಯಾವುದೇ ತೊಂದರೆ ಕೊಡುವುದಿಲ್ಲ. ಬದಲಿಗೆ ಮನುಷ್ಯರನ್ನು ಅತಿ ಹೆಚ್ಚು ಇಷ್ಟಪಡುವ ಜಲಪ್ರಾಣಿಗಳಲ್ಲಿ ಒಂದಾಗಿದೆ ಈ ಸೀಲ್.
ಈಜುತ್ತಿದ್ದ ಬೆನ್ ಎದುರು ಬಂದು ತನ್ನ ಬಾಲದಿಂದ ಸವರಿ ಮುದ್ದು ಮಾಡಿದೆ. ಅಷ್ಟೇ ಅಲ್ಲಾ ಕೊನೆಯಲ್ಲಿ ಬೆನ್ ಗೆ ತನ್ನ ಪ್ರೀತಿಯ ಅಪ್ಪುಗೆಯನ್ನೂ ಕೊಟ್ಟಿದೆ. ಈ ಪ್ರಾಣಿಯ ಆತ್ಮೀಯತೆಗೆ ಬೆನ್ ಸಖತ್ ಖುಷಿಯಾಗಿದ್ದಾರೆ. ನನ್ನ ಜೀವನದಲ್ಲೇ ಇಂತಹ ಅದ್ಭುತವಾದ ಅನುಭವವಾಗಿರಲಿಲ್ಲ. ನನ್ನ ನಿರೀಕ್ಷೆಯಲ್ಲಿ ಇಷ್ಟು ದಿನ ಕಾದಿತ್ತು ಎಂದು ನನಗೆ ಭಾಸವಾಯಿತು ಎಂದಿದ್ದಾರೆ ಬೆನ್.

ಈ ವಿಡಿಯೋವನ್ನು ನೌ ದಿಸ್ ಎನ್ನುವ ಟ್ವಿಟರ್ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು, ಇದಕ್ಕೆ 25 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿ, ಜಲಚರಗಳ ಪ್ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss