Wednesday, July 6, 2022

Latest Posts

ಕಲಬುರಗಿ ಜಿಲ್ಲೆಯಾದ್ಯಂತ ಗುಡುಗು, ಸಿಡಿಲು ಸಹಿತ ಭಾರೀ ಮಳೆ

ಹೊಸ ದಿಗಂತ ವರದಿ, ಕಲಬುರಗಿ:

ಜಿಲ್ಲೆಯಾದ್ಯಂತ ಗುಡುಗು ಸಿಡಿ ಸಮೇತ ಧಾರಾಕಾರವಾಗಿ ಮಳೆ ಸುರಿದಿದೆ. ಸುಮಾರು ಎರಡು ಗಂಟೆಗಳ ಕಾಲ ಸುರಿದ ಮಳೆಯಿಂದ ಬಹುತೇಕ ನಗರದ ಪ್ರಮುಖ ರಸ್ತೆಗಳು ನೀರಿನಿಂದ ಜಲಾವೃತಗೊಂಡಿದ್ದು,ಜನಜೀವನ ಅಸ್ತವ್ಯಸ್ತವಾಗಿದೆ.
ಜಿಲ್ಲೆಯಾದ್ಯಂತ ಮೂರು ದಿನಗಳ ಕಾಲ ಮಳೆಯಾಗುವ ಮೂನ್ಸೂಚನೆಯನ್ನು ಈಗಾಗಲೇ ಹವಾಮಾನ ಇಲಾಖೆಯ ತಜ್ಞರು ನೀಡಿದ್ದಾರೆ. ಹೀಗಾಗಿ ಇಂದು ಭಾನುವಾರ ನಗರ ಸೇರಿದಂತೆ ತಾಲೂಕಿನ ವಿವದೆಡೆ ವರುಣ ತನ್ನ ಆಭ೯ಟವನ್ನು ತೋರಿಸುತ್ತಿದ್ದಾನೆ.
ನಗರದ ಬ್ರಹ್ಮಪುರ, ಲಾಳಗೇರಿ ಕ್ರಾಸ್, ಸೋನಿಯಾ ಗಾಂಧಿ ಕೊಲೊನಿ, ಶಾಂತಿನಗರ, ಪ್ರಶಾಂತ ನಗರ, ವೆಂಕಟೇಶ್ವರ ನಗರ, ಗೋದುತಾಯಿ ಕೊಲೊನಿ, ಎಸ್.ಬಿ. ಟೆಂಪಲ್, ಗುಲಾಬವಾಡಿ, ಎಪಿಎಂಸಿ ಪ್ರದೇಶ ಸೇರಿದಂತೆ ತಗ್ಗೆ ಪ್ರದೇಶದ ಎಲ್ಲಕಡೆ ನೀರು ನಿಂತುಕೊಂಡಿತು. ಚರಂಡಿಗಳು ತುಂಬಿಕೊಂಡು ಕೊಚ್ಚೆಸಮೇತ ಮಳೆ ನೀರು ರಸ್ತೆಗಳ ಮೇಲೆ ಹೊಳೆಯಂತೆ ಹರಿಯಿತು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss