Wednesday, August 17, 2022

Latest Posts

ಕಲಬುರಗಿ ಜಿಲ್ಲೆಯಾದ್ಯಂತ ಗುಡುಗು ಸಿಡಿಲು ಸಹಿತ ವರುಣನ ಆರ್ಭಟ: ಜನಜೀವನ ಅಸ್ತವ್ಯಸ್ತ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಕಲಬುರಗಿ:

ಕಲಬುರಗಿ ಜಿಲ್ಲಾಡಳಿತ ಗುರುವಾರ ಹೈ ಆಲಟ೯ ಘೋಷಣೇ ಮಾಡಿದ ನಂತರ ಜಿಲ್ಲೆಯಾದ್ಯಂತ ರಣಭೀಕರ ಮಳೆಯಾಗುತ್ತಿದೆ.
ಕಲಬುರಗಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕಳೆದೆರಡು ಗಂಟೆಗಳಿಂದ ಗುಡುಗು ಸಿಡಿಲು ಸಮೇತ ವರುಣನ ಅಬ್ಬರ ನಡೆದಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ನಗರದಾದ್ಯಂತ ವಿದ್ಯುತ್ ಸಂಪರ್ಕ ಕಡಿತವಾಗಿದೆ, ನಗರದ ಗೋಲ್ಡ್ ಹಬ್ ಬಳಿಯ ಮುಖ್ಯ ರಸ್ತೆ ಬಹುತೇಕ ಮುಳುಗಡೆಯಾಗಿ,ವಾಹನಗಳ ಸವಾರರು ಪರದಾಡುವ ಪರಿಸ್ಥಿತಿ ನಿಮಾ೯ಣವಾಗಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡು ವಿವಿಧೆಡೆ ಟ್ರಾಫಿಕ್ ಜಾಮ ಕೂಡ ಆಗಿದೆ.ಇದರ ಜೊತೆಗೆ ಮಳೆಯ ಅವಾಂತರ ನೋಡಿ ತಗ್ಗು ಪ್ರದೇಶದಲ್ಲಿ ಇರುವ ಮನೆಗಳು ಜಲಾವೃತಗೊಳ್ಳುವ ಆತಂಕ ಜನರಲ್ಲಿ ಕಾಡುತ್ತಿದೆ.
ಹವಾಮಾನ ಇಲಾಖೆ ಜುಲೈ 07 ರಿಂದ 15ರವರೆಗೆ ಮಹಾ ಮಳೆಯ ಮೂನ್ಸೂಚನೆ ನೀಡಿದೆ. ಭೀಮಾ ನದಿ, ಅಮಜಾ೯ಡ್ಯಾಂ, ಮುಲ್ಲಾಮಾರಿ ಡ್ಯಾಂ ಭಾಗದಲ್ಲಿ ಪ್ರವಾಹದ ಅಂತಕವು ಪ್ರಾರಂಭವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!