ಮನೆಯಲ್ಲಿ ಜನರಿಲ್ಲದಿದ್ದರೂ ಒಂದು ನಾಯಿ ಇದ್ದರೆ ಸಾಕು. ಎಲ್ಲ ಸಂಬಂಧಗಳನ್ನು ಈ ಪ್ರಾಣಿ ಉಳಿಸಿಕೊಳ್ಳುತ್ತದೆ. ಕೆಲವರಂತೂ ಮನುಷ್ಯರಿಂದ ದೂರ ಇದ್ದು ನಾಯಿಗಳ ಜೊತೆ ಇರುತ್ತಾರೆ. ನಾಯಿಯನ್ನು ನಾಯಿ ಅಂತ ಕರೆದರೂ ಕೆಲವರಿಗೆ ಹಿಡಿಸೋದಿಲ್ಲ. ಅದಕ್ಕೆ ಮುದ್ದಾದ ಹೆಸರಿಟ್ಟು ಅದರಲ್ಲೇ ಕರೆಯುತ್ತಾರೆ. ಅದಕ್ಕೆ ರೂಂ ಕೂಡ ಇರುತ್ತದೆ. ಇಂದು ವಿಶ್ವ ಶ್ವಾನ ದಿನ. ಮನೆಯಲ್ಲಿ ನಾಯಿ ಇದ್ದರೆ ಏನೆಲ್ಲಾ ಲಾಭ ಇದೆ ಗೊತ್ತಾ…
- ನಾನು ಒಬ್ಬಂಟಿ ಎನ್ನುವ ಭಾವನೆಯನ್ನು ನಾಯಿ ಓಡಿಸುತ್ತದೆ.
- ಮನೆಯಲ್ಲಿ ನಾಯಿ ಇದ್ದರೆ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ.
- ಜೀವನದಲ್ಲಿ ಯಾವುದೇ ಒತ್ತಡ ಇರಲಿ. ನಿಮ್ಮ ನಾಯಿಮರಿ ಜೊತೆ ಆಟ ಆಡಿದರೆ ಎಲ್ಲವನ್ನೂ ಮರೆತುಬಿಡುತ್ತೀರಿ.
- ಕ್ರೈಸಿಸ್ ಅಂತ ಬಂದಾಗ ನಿಮ್ಮ ನಾಯಿ ಜೊತೆಗೆ ಮಾತನಾಡಿ, ಹೊಸ ಐಡಿಯಾ ಹೊಳೆಯುತ್ತದೆ.
- ನಿಮ್ಮ ಮುದ್ದಿನ ನಾಯಿ ನೀವು ಮಾಡುವ ಎಲ್ಲ ಕೆಲಸಗಳಿಗೂ ಎನ್ಕರೇಜ್ ಮಾಡುತ್ತದೆ.
- ಅದರ ಹಿಂದೆ ನೀವು ಓಡಾಡುವಂತೆ ಮಾಡಿ ನಿಮ್ಮ ಫಿಸಿಕಲ್ ಆಕ್ಟಿವಿಟಿ ಹೆಚ್ಚುಮಾಡುತ್ತದೆ.
- ನಾಯಿಗಳನ್ನು ಸಾಕಿರುವ ಜನ ಹೆಚ್ಚು ಸೋಷಿಯಲ್ ಆಗಿ ಇರುತ್ತಾರೆ.
- ಯಾರನ್ನೂ ನಂಬದ ಪರಿಸ್ಥಿತಿಯಲ್ಲಿ ನೀವಿದ್ದರೆ ನಾಯಿ ಸಾಕಿಕೊಳ್ಳಿ. ಅದನ್ನು ನೀವು ಖಂಡಿತಾ ನಂಬುತ್ತೀರಿ.