ಕಲಬುರಗಿ: ಪಿಎಸ್ಐ ಅಕ್ರಮದ ಕಿಂಗ್‌ ಪಿನ್ ಗೆ ʼಪಿಡಬ್ಲೂಡಿʼ ಹಗರಣದ ಲಿಂಕ್; ವಿಚಾರಣೆ

ಹೊಸದಿಗಂತ ವರದಿ, ಕಲಬುರಗಿ
ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ರುದ್ರಗೌಡ ಪಾಟೀಲ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪಿಡಬ್ಲೂಡಿ ಜೆಇ,ಎಇ ಪರೀಕ್ಷೆ ಅಕ್ರಮದಲ್ಲಿ ರುದ್ರಗೌಡ ಪಾತ್ರ ಕಂಡುಬಂದ ಹಿನ್ನೆಲೆಯಲ್ಲಿ ಬೆಂಗಳೂರು ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ಆತನ ವಿಚಾರಣೆಗೆ ಕಲಬುರ್ಗಿಗೆ ಬಂದಿದ್ದಾರೆ.
ಜೆಇ‌,ಎಇ ಪರೀಕ್ಷಾ ಸಮಯದಲ್ಲಿ ಎಲೆಕ್ಟ್ರಾನಿಕ್ ಬ್ಲೂಟೂತ್ ಡಿವೈಸ್ ಬಳಸಿ ಪರೀಕ್ಷೆ ಬರೆಯಲಾಗಿದೆ. ವೀರಣಗೌಡ ಎಂಬ ಅಭ್ಯರ್ಥಿ ಬ್ಲೂಟೂತ್ ಸಹಾದಿಂದ ಪರೀಕ್ಷೆ ಬರೆಯಲು ಮುಂದಾಗಿದ್ದ ಎಂದು ಕಳೆದ ಡಿಸೆಂಬರ್ 14 ರಂದು ಬೆಂಗಳೂರು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ, ಬೆಂಗಳೂರು ಸೆಂಟ್ ಜಾನ್ಸ್ ಶಾಲೆಯ ಸಿಬ್ಬಂದಿ ದೂರು ನೀಡಿದ್ದರು.
ಪ್ರಕರಣದಲ್ಲಿ ರುದ್ರಗೌಡ ಪಾಟೀಲ್ ಏಳನೇ ಆರೋಪಿಯಾಗಿದ್ದ, ಆದರೆ ತನ್ನ ಪ್ರಭಾವ ಹಾಗು ಹಣದ ಅಸ್ತ್ರ ಬಳಸಿಕೊಂಡು ಚಾರ್ಜ್ ಶೀಟ್ ನಲ್ಲಿ ಹೆಸರು ಬರದಂತೆ ನೋಡಿಕೊಂಡಿದ್ದನಂತೆ. ಇದೀಗ ಕೇಸ್ ಮತ್ತೆ ರೀ ಓಪನ್ ಮಾಡಲಾಗಿದ್ದು, ಅಕ್ರಮದಲ್ಲಿ ಭಾಗಿಯಾಗಿದ್ದ ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಗೆ ಸಂಕಷ್ಟ ಎದುರಾಗಿದೆ.
ಪಿಡಬ್ಲೂಡಿ ಪರೀಕ್ಷೆ ಅಕ್ರಮದಲ್ಲಿ ಕೂಡಾ ರುದ್ರಗೌಡ ಪಾಟೀಲ್ ಕಿಂಗ್ ಪಿನ್ ಎನ್ನಲಾಗುತ್ತಿದೆ. ಅನೇಕರಿಗೆ ಅಕ್ರಮವಾಗಿ ಪರೀಕ್ಷೆ ಬರೆಸಿರುವ ರುದ್ರಗೌಡ ಪಾಟೀಲ್‌ನನ್ನು ಹುಡುಕಿಕೊಂಡು ಬೆಂಗಳೂರು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಕಲಬುರಗಿಗೆ ಆಗಮಿಸಿದ್ದಾರೆ. ಇಂದು ರುದ್ರಗೌಡ ಪಾಟೀಲ್ ನನ್ನು ಪೊಲೀಸ್ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ.
ಸದ್ಯ ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ರುದ್ರಗೌಡ ಪಾಟೀಲ್ ಕಲಬುರ್ಗಿ ಕೇಂದ್ರ ಕಾರಾಗೃಹದಲ್ಲಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!