Friday, March 5, 2021

Latest Posts

ನಿಮ್ಮ ದಾಂಪತ್ಯ ಜೀವನದಲ್ಲಿ ನೆಮ್ಮದಿಯೇ ಇಲ್ಲದಂತಾಗಿದೆಯೇ? ದಾಂಪತ್ಯದಲ್ಲಿ ಖುಷಿ ಕಾಣಬೇಕೆಂದರೆ ಈ ಟಿಪ್ಸ್ ಫಾಲೋ ಮಾಡಿ..

ಇತ್ತೀಚಿನ ದಿನಗಳಲ್ಲಿ ಯಾವುದೂ ಹೆಚ್ಚು ದಿನ ಬಾಳಿಕೆ ಬರುವುದಿಲ್ಲ. ಸಂಬಂಧಗಳು ಕೂಡ. ಅದರಲ್ಲೂ ಗಂಡ-ಹೆಂಡತಿ ಸಂಬಂಧ ಚಿಕ್ಕ ಚಿಕ್ಕ ಕಾರಣಗಳಿಗೆ ಮುರಿದು ಬೀಳುತ್ತಿದೆ. ಅರ್ಧಕ್ಕರ್ಧ ಜನ ದಾಂಪತ್ಯದಲ್ಲಿ ನೆಮ್ಮದಿಯೇ ಇಲ್ಲ ಎನ್ನುತ್ತಾರೆ. ಇದಕ್ಕೆ ಮುಖ್ಯ ಕಾರಣ ಎಂದರೆ ಹೊಂದಾಣಿಕೆ ಇಲ್ಲದಿರುವುದು. ಒಬ್ಬರ ಬಗ್ಗೆ ಒಬ್ಬರಿಗೆ ನಂಬಿಕೆ ಕಡಿಮೆ ಆಗಿರುವುದು. ನಿಮ್ಮ ದಾಂಪತ್ಯ ಚೆನ್ನಾಗಿರಬೇಕು, ಬಹಳ ದಿನದವರೆಗೆ ಬಾಳಿಕೆ ಬರಬೇಕು ಎಂದಾದರೆ ಇಲ್ಲಿ ಕೆಲವೊಂದು ಟಿಪ್ಸ್ ಇದೆ ಅದನ್ನು ಅನುಸರಿಸಿ..

ಹೆಚ್ಚು ಮಾತನಾಡಿ:
ಆದಷ್ಟು ಹೆಚ್ಚು ಹೆಚ್ಚು ಮಾತನಾಡಿಕೊಳ್ಳಿ. ಮಾತನಾಡಿಕೊಂಡಷ್ಟು ಒಬ್ಬರ ಮನಸ್ಥಿತಿ ಒಬ್ಬರಿಗೆ ತಿಳಿಯುತ್ತದೆ. ಇಷ್ಟ ಕಷ್ಟ ಒಬ್ಬರಿಗೊಬ್ಬರು ತಿಳಿದುಕೊಂಡಷ್ಟು ನಿಮ್ಮ ಸಂಬಂಧ ಗಟ್ಟಿಯಾಗುತ್ತದೆ. ಸಂಗಾತಿಯೊಂದಿಗೆ ಮಾತನಾಡಲು ದಿನದ ಒಂದು ಗಂಟೆ ಎಲ್ಲಾ ಕೆಲಸ ಬಿಟ್ಟು ಸಮಯ ಕೊಡಿ. ನಿಧಾನವಾಗಿ ನಿಮಗೇ ಗೊತ್ತಾಗುತ್ತದೆ. ನಿಮ್ಮ ಮಧ್ಯ ಎಷ್ಟು ಹೊಂದಾಣಿಕೆ ಬಂದಿದೆ ಎಂದು.

ಸಮಯ:
ಗಂಡ-ಹೆಂಡತಿ ಒಬ್ಬರಿಗೊಬ್ಬರು ಸಮಯ ಕೊಡಿ. ಇದು ಕಲಿಯುಗವಲ್ಲ! ಮೊಬೈಲ್ ಯುಗ. ಮೊಬೈಲ್ ಬಳಸುವ ಅರ್ಧ ಸಮಯವನ್ನು ನಿಮ್ಮ ಸಂಗಾತಿಗೆ ನೀಡಿ. ಹೆಚ್ಚು ಸಮಯ ಇಬ್ಬರೇ ಕಳೆದಷ್ಟು ಹೊಂದಾಣಿಕೆ ಬರುತ್ತದೆ. ಹೊಂದಾಣಿಕೆ ಹೆಚ್ಚಿದಷ್ಟು ಗಂಡ-ಹೆಂಡತಿ ಸಂಬಂಧ ಗಟ್ಟಿಯಾಗುತ್ತದೆ.

ಸ್ಪೆಷಲ್ ದಿನ:
ದಾಂಪತ್ಯ ಜೀವನದಲ್ಲಿ  ಒಂದಿಷ್ಟು ವಿಶೇಷ ದಿನಗಳಿರುತ್ತದೆ. ಅದನ್ನು ಎಂದಿಗೂ ಮರೆಯಬೇಡಿ.
ನಿಮ್ಮ ಮದುವೆಯಾದ ದಿನ, ಮೊದಲು ಭೇಟಿಯಾದ ದಿನ, ಎಂಗೇಜ್ ಮೆಂಟ್ ದಿನ, ಹುಟ್ಟು ಹಬ್ಬ ಹೀಗೆ ನಿಮ್ಮಿಬ್ಬರಿಗೆ ಯಾವ ದಿನ ಸ್ಪೇಷಲ್ ಆಗಿರುತ್ತದೆಯೋ ಅಂತಹ ದಿನಗಳನ್ನು ಜೀವನದುದ್ದಕ್ಕೂ ಮರೆಯದಿರಿ. ಇಬ್ಬರೂ ಒಬ್ಬರಿಗೊಬ್ಬರು ಗಿಫ್ಟ್ ಕೊಟ್ಟುಕೊಳ್ಳಿ. ಅವರಿಷ್ಟದಂತೆ ಆ ದಿನವಾದರೂ ಇರಲು ಟ್ರೈ ಮಾಡಿ. ದಿನಕ್ಕಿಂತ ವಿಶೇಷವಾಗಿ ಅಡುಗೆ ಮಾಡಿಕೊಳ್ಳಿ. ಇಂತಹ ಚಿಕ್ಕ ಪುಟ್ಟ ಕುಶಿಗಳು ನಿಮ್ಮ ಸಂಬಂಧವನ್ನು ಗಟ್ಟಿ ಮಾಡುತ್ತದೆ.

ಹೊರಗೆ ಹೋಗಿ:
ಮದುವೆ ಶುರುವಿನಲ್ಲಿ ವಾರಕ್ಕೊಮ್ಮೆ ಆಚೆ ಹೋಗುತ್ತಿರುತ್ತೀರಿ, ಟ್ರಿಪ್ ಹೋಗುತ್ತಿರುತ್ತೀರಿ. ಆದರೆ ವರ್ಷ ಕಳೆದಂತೆ ಮನೆ, ಆಫೀಸ್ ಇದೆ ಜೀವನ ಆಗಿರುತ್ತದೆ. ಗಂಡ-ಹೆಂಡತಿ ಎಲ್ಲಿಯೂ ಆಚೆ ಹೋಗುವುದಿಲ್ಲ. ಇಬ್ಬರಿಗೂ ಜೀವನವೆಂದರೆ ಬೇಸವೆನಿಸುತ್ತಿರುತ್ತದೆ. ಅಂಥ ಸಮಯದಲ್ಲಿ ಎಲ್ಲಿಯಾದರೂ ಆಚೆ ಇಬ್ಬರೆ ಹೋಗಿ ಬನ್ನಿ. ಸಂಬಂಧ ಇನ್ನಷ್ಟು ಬೆಸೆಯುತ್ತದೆ. ಹೊಂದಾಣಿಕೆ ಗಟ್ಟಿಯಾಗುತ್ತದೆ.

ಗುಟ್ಟು ಬೇಡವೇ ಬೇಡ:
ಒಬ್ಬರಿಗೊಬ್ಬರು ಜೀವಕ್ಕೆ ಜೀವ ಎಂದು ಪ್ರೀತಿಸುವವರ ನಡುವೆ ಗುಟ್ಟುಗಳು ಏತಕ್ಕೆ? ಯಾವುದೇ ಗುಟ್ಟನ್ನು ನಿಮ್ಮ ಸಂಗಾತಿಯೊಂದಿಗೆ ಮಾಡಬೇಡಿ. ಗುಟ್ಟು ಎಂಬುದು ಪ್ರಾರಂಭವಾಗುವುದು ನಿಮ್ಮ ಮೊಬೈಲ್ ಪಾಸ್‌ವರ‍್ಡ್ ಸಂಗಾತಿಗೆ ಹೇಳದಿರುವುದರಿಂದ. ಮೊಬೈಲ್ ಪಾಸ್‌ವರ‍್ಡ್ ಹೇಳುತ್ತಿಲ್ಲ ಎಂದಾದರೆ ಯಾವುದೋ ಸಿಕ್ರೆಟ್ ಇದೆ ಎಂಬ ಅನುಮಾನ ಸಂಗಾತಿಗೆ ಬರಲು ಪ್ರಾರಂಭವಾಗುತ್ತದೆ. ಸಣ್ಣದಾಗಿ ಶುರುವಾದ ಅನುಮಾನ ದೊಡ್ಡದಾಗುತ್ತದೆ. ಗುಟ್ಟುಗಳನ್ನು ಮಾಡಬೇಡಿ.

ಒಬ್ಬರ ಕುಟುಂಬ ಒಬ್ಬರು ಪ್ರೀತಿಸಲಿ:
ಗಂಡ-ಹೆಂಡತಿಗಿಬ್ಬರಿಗೂ ತಮ್ಮ ತಮ್ಮ ಕುಟುಂಬದವರ ಮೇಲೆ ಹೆಚ್ಚು ಪ್ರೀತಿ ಇದ್ದೆ ಇರುತ್ತದೆ. ತಾನು ತನ್ನ ಕುಟುಂಬದವರನ್ನು ಪ್ರೀತಿಸಿದಂತೆಯೇ ತನ್ನ ಸಂಗಾತಿಯೂ ತನ್ನ ಕುಟುಂಬವನ್ನು ಪ್ರೀತಿಸಲಿ ಎಂಬ ಆಸೆ ಇದ್ದೆ ಇರುತ್ತದೆ. ನೀವು ಅವರ ಆಸೆಗೆ ತಕ್ಕಂತೆ ಅವರ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳದಿದ್ದರೆ ಅಲ್ಲಿಯೇ ದಾಂಪತ್ಯ ಬಿರುಕು ಬಿಡಲು ಪ್ರಾರಂಭಿಸುತ್ತದೆ. ದಂಪತಿಗಳು ಎರಡೂ ಕುಟುಂಬವನ್ನೂ ಕೊನೆಯವರೆಗೂ ಪ್ರೀತಿಸಿ. ನಿಮ್ಮ ದಾಂಪತ್ಯ ಸುಂದರವಾಗಿ ಇರುತ್ತದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss