Aero India 2023 : ಎಲಿವೇಟೆಡ್ ಫ್ಲೈ ಓವರ್ ನಲ್ಲಿ ಸಾರ್ವಜನಿಕರ ವಾಹನಗಳಿಗೆ ನಿಷೇಧ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಏರ್​ ಶೋ ಹಿನ್ನೆಲೆ ಹೆಬ್ಬಾಳ ಎಸ್ಟೀಮ್ ಮಾಲ್ ಫ್ಲೈ ಓವರ್ ನಿಂದ ಯಲಹಂಕ ವರೆಗೂ ಎಲಿವೇಟೆಡ್ ಫ್ಲೈ ಓವರ್ ಮೇಲೆ ವಾಹನ ಸಂಚಾರ ನಿಷೇಧಿಸಲಾಗಿದೆ. ಏರ್ ಶೋಗೆ ತೆರಳುವವರಿಗೆ ಮಾತ್ರ ನಿಗದಿತ ಪಾಸ್ ತೋರಿಸಿ ಎಲಿವೇಟೆಡ್ ಫ್ಲೈ ಓವರ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಯಲಹಂಕ , ಕೋಡಿಗೆಹಳ್ಳಿ , ಬ್ಯಾಟರಾಯನಪುರ ಸುತ್ತಮುತ್ತ ಪ್ರದೇಶ ಸಾರ್ವಜನಿಕರು ಫ್ಲೈ ಓವರ್ ಪಕ್ಕದ ಸರ್ವಿಸ್ ರಸ್ತೆ ಬಳಸುವಂತೆ ಸೂಚನೆ ನೀಡಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ಹೆಣ್ಣೂರು ಜಂಕ್ಷನ್ ಮುಖಾಂತರ ತೆರಳುವಂತೆ ಬೆಂಗಳೂರು ಸಂಚಾರ ಪೊಲೀಸರಿಂದ ವಾಹನ ಸವಾರರಿಗೆ ಸೂಚನೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!