Monday, August 15, 2022

Latest Posts

ತಾಲಿಬಾನಿಗಳಿಂದ ರಕ್ಷಿಸಿಕೊಳ್ಳಲು ಸ್ವದೇಶ ಬಿಟ್ಟ ಪಾಪ್ ಸಿಂಗರ್ ಅರಿಯಾನ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ತಾಲಿಬಾನಿಗಳು ಅಫ್ಘಾನಿಸ್ಥಾನವನ್ನು ಸಂಪೂರ್ಣವಾಗಿ ತಮ್ಮ ಅಧಿಕಾರಕ್ಕೆ ಪಡೆದುಕೊಂಡ ನಂತರ ಇದೀಗ ಅಲ್ಲಿನ ಪಾಪ್ ಸ್ಟಾರ್ ಅರಿಯಾನ ಸಯೀದ್ ಪ್ರಾಣ ರಕ್ಷಿಸಿಕೊಳ್ಳಲು ದೇಶವನ್ನು ತೊರೆದಿದ್ದಾರೆ.
ಹೌದು, ಅಫ್ಘಾನಿಸ್ಥಾನದಲ್ಲಿ ಮಹಿಳೆಯರು ಬುರ್ಕಾ ಧರಿಸದಿದ್ದರೆ ತಲೆದಂಡ ಖಚಿತವಾಗಿದ್ದು, ತಾಲಿಬಾನಿಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಜನತೆ ನಿದ್ದೆಗೆಟ್ಟು ಕೂತಿದ್ದಾರೆ. ಈ ವೇಳೆ ಪಾಪ್ ಸ್ಟಾರ್ ಅರಿಯಾನ ಸಯೀದ್ ದಂಪತಿ ಅಮೆರಿಕದ ಕಾರ್ಗೋ ವಿಮಾನದಲ್ಲಿ ಹೊರಟು ಪ್ರಾಣ ಉಳಿಸಿಕೊಂಡಿದ್ದಾರೆ.
ಅರಿಯಾನ ಅಫ್ಘಾನ್ ತೊರೆದು ಹೋಗುತ್ತಿರುವ ಚಿತ್ರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದು ಸದ್ಯ ಸೋಸಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅರಿಯಾನ ಅಫ್ಘಾನಿಸ್ಥಾನದಲ್ಲಿ ನಡೆಯುವ ಸಂಗೀತ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿಯೂ ಕಾಣಿಸಿಕೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss