Sunday, April 18, 2021

Latest Posts

20 ತಾಲಿಬಾನ್ ಭಯೋತ್ಪಾದಕರನ್ನು ಸದೆಬಡಿದ ಅಫ್ಘಾನ್ ಭದ್ರತಾ ಪಡೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತ್ಯದಲ್ಲಿ ಮಾರ್ಚ್ 2 ರಂದು ಅಫ್ಘಾನ್ ಭದ್ರತಾ ಪಡೆಗಳು 20 ತಾಲಿಬಾನ್ ಭಯೋತ್ಪಾದಕರನ್ನು ಸದೆಬಡೆದಿವೆ.
ಕಂದಹಾರ್ ಪ್ರಾಂತ್ಯದ ಅರ್ಘಂಡಾಬ್ ಜಿಲ್ಲೆಯಲ್ಲಿ 20 ತಾಲಿಬಾನ್ ಉಗ್ರರನ್ನು ಹತ್ಯೆ ಮಾಡಲಾಗಿದೆ. ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ನಾಶಪಡಿಸಲಾಗಿದೆ ಎಂದು ಅಫ್ಘಾನಿಸ್ತಾನ ರಕ್ಷಣಾ ಸಚಿವಾಲಯ ಟ್ವೀಟ್ ಮಾಡಿದೆ.
ಇದಲ್ಲದೆ, ಅಫ್ಘಾನ್ ಕಮಾಂಡೋ ಪಡೆಗಳು ಮಂಗಳವಾರ 27 ಮಿಲಿಟರಿ ಸದಸ್ಯರು ಮತ್ತು ಏಳು ನಾಗರಿಕರನ್ನು ಹೆರಾತ್ ಪ್ರಾಂತ್ಯದ ತಾಲಿಬಾನ್ ಕಾರಾಗೃಹಗಳಿಂದ ಮುಕ್ತಗೊಳಿಸಿವೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss