spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇಸ್ಲಾಂಗೆ ಮತಾಂತರಗೊಳ್ಳಲು ಸಿಖ್ಖರ ಮೇಲೆ ತಾಲಿಬಾನ್ ತಾಕೀತು!

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಫ್ಘಾನಿಸ್ಥಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಹೆಚ್ಚಾಗಿದ್ದು, ಇದೀಗ ಅಲ್ಲಿನ ಸಿಖ್ ಜನರನ್ನು ಇಸ್ಲಾಂ ನ ಸುನ್ನಿ ಧರ್ಮಕ್ಕೆ ಮತಾಂತರಗೊಳ್ಳುವಂತೆ ತಾಲಿಬಾನ್ ಒತ್ತಾಯಿಸುತ್ತಿರುವುದು ವರದಿಯಾಗಿದೆ.
ಅಫ್ಘಾನಿಸ್ಥಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಅಲ್ಲಿನ ಸಿಖ್ ಸಮುದಾಯದವರು ಇಸ್ಲಾಂಗೆ ಮತಾಂತರವಾಗಬೇಕು, ಇಲ್ಲವಾದರೆ ದೇಶ ಬಿಟ್ಟು ಹೋಗಬೇಕು ಎಂದು ತಾಲಿಬಾನ್ ತಾಕೀತು ಮಾಡಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ವ್ಯವಸ್ಥಿತ ತಾರತ್ಯಮ ಮತ್ತು ಧಾರ್ಮಿಕ ಹಿಂಸಾಚಾರಗಳು ಅತಿರೇಕಕ್ಕೆ ತಿರುಗಿದ್ದು, ಅಫ್ಘಾನ್ ನಲ್ಲಿನ ಸಿಖ್ಖರ ಪರಿಸ್ಥಿತಿ ಹದಗೆಟ್ಟಿದೆ ಎಂದು ಅಂತಾರಾಷ್ಟ್ರೀಯ ಹಕ್ಕು ಹಾಗೂ ಭದ್ರತೆಯ ಒಕ್ಕೂಟ ತಿಳಿಸಿದೆ.
ಕಾಬೂಲ್ ನ ಘಜ್ನಿ ಹಾಗೂ ನಾಂಗರ್ ಹರದ್ ನಲ್ಲಿ ಸಿಖ್ ಸಮುದಾಯದವರು ವಾಸವಾಗಿದ್ದಾರೆ. ಕಳೆದ ವಾರ ಕಾರ್ತ್-ಇ-ಪಾರ್ವಾನ್ ಜಿಲ್ಲೆಯಲ್ಲಿನ ಗುರುದ್ವಾರದ ಮೇಲೆ 15-20 ಉಗ್ರರು ದಾಳಿ ಮಾಡಿ, ಭದ್ರತಾ ಕಾವಲುಗಾರರನ್ನು ಕಟ್ಟಿ ಹಾಕಿ ಚಿತ್ರಹಿಂಸೆ ಕೊಟ್ಟಿರುವುದು ವರದಿಯಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss