spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹೊಟ್ಟೆ ತುಂಬಿಸಿಕೊಳ್ಳಲು ಸ್ವಂತ ಮಕ್ಕಳನ್ನೇ ಮಾರುತ್ತಿದ್ದಾರೆ ಆಫ್ಘನ್ನರು!

- Advertisement -Nitte

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಅಲ್ಲಿನ ಜನರ ಆರ್ಥಿಕ ಪರಿಸ್ಥಿತಿ ಮುಗ್ಗರಿಸಿದೆ.
ಮೂರು ಹೊತ್ತಿನ ಊಟಕ್ಕೂ ಜನ ಪರದಾಡುತ್ತಿದ್ದಾರೆ. ಮನೆಯಿಂದ ಹೊರ ಕಾಳಿಟ್ಟರೆ ಜೀವಂತವಾಗಿ ವಾಪಾಸ್ ಬರುತ್ತೀವಿ ಎನ್ನುವ ನಂಬಿಕೆಯೇ ಇಲ್ಲದೆ ಜನ ಬದುಕುತಿದ್ದಾರೆ.
ಹೊಟ್ಟೆಗೆ ಆಹಾರವಿಲ್ಲದೆ ತಮ್ಮ ಸ್ವಂತ ಮಕ್ಕಳನ್ನೇ ಮಾರುವ ಪರಿಸ್ಥಿತಿಗೆ ತಾಲಿಬಾನಿಗಳು ತಲುಪಿದ್ದಾರೆ. ಸಿಕ್ಕ ಸಿಕ್ಕ ಬೆಲೆಗೆ ಮಕ್ಕಳನ್ನು ಮಾರುತ್ತಾ ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿದ್ದಾರೆ.
ದೇಶದಲ್ಲಿ ಎಲ್ಲದರ ಬೆಲೆಯೂ ಹೆಚ್ಚಾಗಿದ್ದು, ಆಮದು ಮಾಡಿಕೊಳ್ಳುತ್ತಿರುವ ಪ್ರಮಾಣ ಕಡಿಮೆಯಾಗಿದೆ. ಈಗಿರುವ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಇದೇ ಕಾರಣದಿಂದ ಯಾವ ವಸ್ತುಗಳನ್ನು ಕೊಳ್ಳಲಾಗದೇ ಹೈರಾಣಾಗಿದ್ದಾರೆ.
ಕಾಬೂಲ್‌ನಲ್ಲಿ ಮಹಿಳೆಯೊಬ್ಬರು ತಮ್ಮ ಮಗುವನ್ನು 37 ಸಾವಿರ ರೂ.ಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ದುಃಖ ಇಲ್ಲವೇ ಎಂದು ಪ್ರಶ್ನಿಸಿದಾಗ ಉಳಿದವರ ಜೀವ ಉಳಿಯಬೇಕೆಂದರೆ ಮಗು ಮಾರುವುದು ಅನಿವಾರ್ಯ ಎಂದು ಮಹಿಳೆ ಹೇಳಿದ್ದಾರೆ. ಈ ರೀತಿ ಒಂದಲ್ಲ, ನೂರಾರು ಕುಟುಂಬಗಳು ಮಾಡುತ್ತಿವೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss