ತಾಲೀಬಾನಿಗಳ ಆಡಳಿತದಲ್ಲಿ ಜೀವಕ್ಕಿಲ್ಲ ಬೆಲೆ; ಹಸಿವಿನಿಂದ ಮೂರು ತಿಂಗಳಲ್ಲಿ 13,000 ಶಿಶುಗಳ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಜಗತ್ತು ರಷ್ಯಾ-ಉಕ್ರೇನ್ ಯುದ್ಧ ಬಿಕ್ಕಟ್ಟು, ಅಲ್ಲಿನ ಸಾವುನೋವುಗಳಿಗೆ ಮರುಗುತ್ತಿದೆ. ಆದರೆ ಭಯೋತ್ಪಾದಕ ತಾಲೀಬಾನಿಗಳ ಆಡಳಿತವಿರುವ ಅಫ್ಘಾನಿಸ್ತಾನದಲ್ಲಿ ಅದಕ್ಕಿಂತಲೂ ಭೀಕರ ಪರಿಸ್ಥಿತಿಯಿದೆ. ಈ ವರ್ಷದ ಜನವರಿಯಿಂದ ಅಫ್ಘಾನಿಸ್ತಾನದಲ್ಲಿ ಸುಮಾರು 13,000 ನವಜಾತ ಶಿಶುಗಳು ಅಪೌಷ್ಟಿಕತೆ ಮತ್ತು ಹಸಿವಿನಿಂದ ಬಳಲಿ ಸಾವನ್ನಪ್ಪಿವೆ.
ಸದಾ ಯುದ್ಧಪೀಡಿತವಾಗಿರುವ ಅಫ್ಘಾನ್‌ ನ ಜನಸಂಖ್ಯೆಯ 95 ಪ್ರತಿಶತದಷ್ಟು ಜನರಿಗೆ ತಿನ್ನಲು ಸರಿಯಾಗಿ ಆಹಾರ ಸಿಗುತ್ತಿಲ್ಲ. 3.5 ಮಿಲಿಯನ್ ಮಕ್ಕಳು ಪೌಷ್ಟಿಕಾಂಶ ಬೆಂಬಲದ ಅಗತ್ಯವಿದೆ. ವಿಶ್ವಸಂಸ್ಥೆಯು ಅಫ್ಘಾನ್‌ ನಲ್ಲಿ ಎದುರಾಗಿರುವ ಆಹಾರ ಬಿಕ್ಕಟ್ಟಿನ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದೆ.
ಈ ವರ್ಷಾರಂಭದಿಂದ 13,000 ನವಜಾತ ಶಿಶುಗಳು ಸಾವನ್ನಪ್ಪಿವೆ. ಅಂದರೆ ಅಲ್ಲಿ ಪ್ರತಿದಿನ 170ಕ್ಕಿಂತ ಹೆಚ್ಚಿನ ಶಿಶುಗಳು ಮರಣವಪ್ಪುತ್ತಿವೆ. ಅಫ್ಘಾನ್‌ ನ 34 ಪ್ರಾಂತ್ಯಗಳ ಪೈಕಿ 28 ರಲ್ಲಿ ಜನರು ತೀವ್ಅರ ಪೌಷ್ಟಿಕತೆಯ ಸಮಸ್ಬಯೆಗಳಿಂದ ಳಲುತ್ತಿದ್ದಾರೆ. ಅವರಲ್ಲಿ 3.5 ಮಿಲಿಯನ್‌ಗಿಂತಲೂ ಹೆಚ್ಚಿನ ಮಕ್ಕಳೇ ಇದ್ದು ಅವರಿಗೆ ತತ್‌ ಕ್ಷಣದ ವೈದ್ಯಕೀಯ ನೆರವುಗಳು ಅಗತ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಫ್ಘಾನಿಸ್ತಾನದ ನರವಿಗೆ ತತ್‌ ಕ್ಷಣ ಧಾವಿಸುವಂತೆ ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!