ರಂಜಾನ್‌ ಪ್ರಾರ್ಥನೆ ವೇಳೆ ಕಾಬೂಲ್‌ ಮಸೀದಿಯಲ್ಲಿ ಬಾಂಬ್‌ ಸ್ಫೋಟ; ಮೃತರ ಸಂಖ್ಯೆ 50ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಫ್ಗಾನಿಸ್ತಾನದ ಮಸೀದಿಯೊಂದರಲ್ಲಿ ಶುಕ್ರವಾರ ಸಂಭವಿಸಿದ ಪ್ರಬಲ ಬಾಂಬ್‌ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಮುಸ್ಲಿಮರ ಪವಿತ್ರ ಮಾಸ ರಂಜಾನ್‌ನಲ್ಲಿ ಪ್ರಾರ್ಥನೆ ಸಲ್ಲಿಸಲು ಮಸೀದಿಗಳೆಡೆಗೆ ಆಹಗಮಿಸುತ್ತರುವ ನಾಗರಿಕನ್ನು ಗುರಿಯಾಗಿಸಿಕೊಂಡು ಸರಣಿ ದಾಳಿಗಳು ನಡೆಯುತ್ತವೆ. ಕಾಬೂಲ್ ನ ಪಶ್ಚಿಮದಲ್ಲಿರುವ ಖಲೀಫಾ ಸಾಹಿಬ್ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ಸಂದರ್ಭದಲ್ಲಿ ಆತ್ಮಾಹುತಿ ಬಾಂಬರ್‌ ಸ್ಫೋಟಿಸಿಕೊಂಡು 50 ಕ್ಕೂ ಹೆಚ್ಚು ಜನರನ್ನು ಕೊಂದಿದ್ದಾನೆ ಎಂದು ಆಂತರಿಕ ಸಚಿವಾಲಯದ ಉಪ ವಕ್ತಾರ ಬೆಸ್ಮುಲ್ಲಾ ಹಬೀಬ್ ಹೇಳಿದರು.
ಶುಕ್ರವಾರದ ಪ್ರಾರ್ಥನೆಯ ನಂತರ ಸುನ್ನಿ ಮುಸ್ಲೀಮರು ಝಿಕ್ರ್ ಎಂದು ಕರೆಯಲ್ಪಡುವ ಸಭೆಯೊಂದಕ್ಕೆ ಜಮಾಯಿಸಿದಾಗ ಈ ದಾಳಿ ನಡೆದಿದೆ. ಝಿಕ್ರ್ ಎಂದರೆ ಕೆಲವು ಮುಸ್ಲಿಮರು ಅಭ್ಯಾಸ ಮಾಡುವ ಧಾರ್ಮಿಕ ಸ್ಮರಣೆಯ ಕ್ರಿಯೆ. ಆದರೆ ಕೆಲವು ಕಠಿಣ ಸುನ್ನಿ ಗುಂಪುಗಳು ಈ ಆಚರಣೆಯನ್ನು ಧರ್ಮದ್ರೋಹಿ ಎಂದು ಪರಿಗಣಿಸುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!